ಉಡುಪಿ, ನ.6 : ಖಾಸಗಿ ಬ್ಯಾಂಕ್ ವೊಂದರ ಉಡುಪಿ ಶಾಖೆಯಲ್ಲಿ 500ರೂ. ಮುಖ ಬೆಲೆ ಇರುವ ಐದು ಖೋಟಾ ನೋಟುಗಳು ಪತ್ತೆಯಾಗಿದೆ.
ಆ.30, ರ ಬೆಳಿಗ್ಗೆ ಸುಮಾರಿಗೆ ಅನಾಮಧೇಯ ವ್ಯಕ್ತಿಯೊಬ್ಬ ಬಂದು ರೇವು ಎಂಬವರ ಖಾತೆಗೆ 50,000 ರೂ. ಹಣವನ್ನು ಜಮಾ ಮಾಡಿದ್ದಾನೆ. ಆ ವೇಳೆಯಲ್ಲಿ ಬ್ಯಾಂಕ್ನಲ್ಲಿ ತುಂಬಾ ಜನ ಇದ್ದ ಕಾರಣದಿಂದಾಗಿ ಕ್ಯಾಶಿಯರ್ ಮುರುಳಿ ಅವರಿಗೆ ಇದು ಆ ದಿನ ಗಮನಕ್ಕೆ ಬಂದಿರಲಿಲ್ಲ.
ಬಿಡುವಿನ ಸಮಯದಲ್ಲಿ ಕ್ಯಾಶಿಯರ್ ಹಣವನ್ನು ಮೆಷಿನ್ನಲ್ಲಿ ಹಾಕಿ ಪರಿಶೀಲನೆ ನಡೆಸುವಾಗ ಅವರಿಗೆ 500 ರೂ. ಮುಖಬೆಲೆಯ 5 ಖೋಟಾ ನೋಟುಗಳು ದೊರೆತಿದೆ.
ಬ್ಯಾಂಕ್ನ ಚಿಫ್ ಮ್ಯಾನೇಜರ್ ಆಗಿರುವ ಜೆಸ್ಟಿನ್ ಮ್ಯಾಥ್ಯೂ ಅವರು ನೀಡಿದ ದೂರಿನ ಅನ್ವಯ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿರುತ್ತದೆ.

