ಉಡುಪಿ: ಕುಂದಾಪುರದ ಅಮಾವಾಸ್ಯೆ ಬೈಲು ಠಾಣಾ ವ್ಯಾಪ್ತಿಯಲ್ಲಿ ಮಾನಸಿಕ ಅಸ್ವಸ್ಥ ಮಹಿಳೆ ಗೋಣಿಚೀಲ ಹಿಡಿದು ಸಾರ್ವಜನಿಕ ಸ್ಥಳದಲ್ಲಿ ತಿರುಗಾಡುತ್ತಿದ್ದವರನ್ನು ರಕ್ಷಿಸಿ ವಿಶು ಶೆಟ್ಟಿ ಮಂಜೇಶ್ವರದ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಸ್ನೇಹಾಲಯಕ್ಕೆ ದಾಖಲಿಸಿದ ಮಾನವೀಯ ಘಟನೆ ನಡೆದಿದೆ.
ಮಹಿಳೆ ಬಿಹಾರ ಮೂಲದ ಸದ್ರುನೀಶ(40) ರಕ್ಷಣೆಗೊಳಗಾದ ಮಾನಸಿಕ ಅಸ್ವಸ್ಥೆ. ಮೊದಲು ಈಕೆಯನ್ನು ಸಖಿ ಸೆಂಟರಿಗೆ ದಾಖಲಿಸಿದ್ದು, ಸಖಿ ಸೆಂಟರಿನಲ್ಲಿ ಶುಚಿಗೊಳಿಸಿ ಸಂತೈಸಿದ್ದರು. ಮಹಿಳೆಯ ಮನೋರೋಗ ಬಹಳ ಉಲ್ಬಣವಾಗಿದ್ದು, ವಿಶು ಶೆಟ್ಟಿ ಮಹಿಳೆಯ ಚಿಕಿತ್ಸೆ ಹಾಗೂ ಪುನರ್ವಸತಿಗೆ ಸ್ನೇಹಾಲಯದ ಮುಖ್ಯಸ್ಥರಾದ ಜೋಸೆಫ್ ಕ್ರಾಸ್ತಾರಲ್ಲಿ ವಿನಂತಿಸಿದ್ದು ಸ್ಪಂದನೆ ನೀಡಿದ್ದಾರೆ. ನಂತರ ವಿಶು ಶೆಟ್ಟಿ ವಾಹನ ಮುಖಾಂತರ ಅಮಾವಾಸೆಬೈಲು ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಸಖಿ ಕೇಂದ್ರದ ಸಿಬ್ಬಂದಿಗಳ ಸಹಾಯದಿಂದ ಮಂಜೇಶ್ವರದ ಸ್ನೇಹಾಲಯ ಆಶ್ರಮಕ್ಕೆ ದಾಖಲಿಸಿದ್ದಾರೆ.
ಇಂತಹ ಪ್ರಕರಣಗಳಲ್ಲಿ ರಕ್ಷಣೆ ಕಾರ್ಯ ಕ್ಷಿಪ್ರ ನಡೆದಲ್ಲಿ ಮಹಿಳೆಗೆ ಆಗುವ ಅಪಾಯ ತಪ್ಪುತ್ತದೆ. ನಿರ್ಲಕ್ಷ್ಯ ಸಲ್ಲದು. ಈ ಪ್ರಕರಣದಲ್ಲಿ ಸಖಿ ಸೆಂಟರ್ ಹಾಗೂ ಅಮಾವಾಸೆಬೈಲು ಪೊಲೀಸರು ನೀಡಿದ ಸಹಕಾರ ಶ್ಲಾಘನೀಯ. ಆಶ್ರಯ ನೀಡಿದ ಸ್ನೇಹಾಲಯ ಆಶ್ರಮದ ಮುಖ್ಯಸ್ಥರು ಮಾನವೀಯ ಧರ್ಮ ಮೆರೆದಿದ್ದಾರೆ.
ವಿಶು ಶೆಟ್ಟಿ ಅಂಬಲಪಾಡಿ

