ಉಡುಪಿ : ಗ್ರಾಮೀಣ ಬಂಟ ಸಂಘ ದ ಚಾರಿಟೇಬಲ್ ಟ್ರಸ್ಟ್, ಕುಂತಳ ನಗರ ಮಣಿಪುರ, ಉಡುಪಿ ಇವರ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನ ವತಿಯಿಂದ ಸತತವಾಗಿ 3 ನೇ ಬಾರಿ ಬೃಹತ್ ಎರಡು ದಿನಗಳ ಉದ್ಯೋಗ ಮೇಳ ನವೆಂಬರ್ ತಾ 16 ಮತ್ತು 17 ರಂದು ಎಂ.ಆರ್.ಜಿ ಗ್ರೂಪ್ ನ ಪ್ರಯೋಜಕತ್ವದಲ್ಲಿ ನಡೆಯಲಿದೆ.
ಕಳೆದ ಎರಡು ಬಾರಿ ನಡೆದ ಉದ್ಯೋಗ ಮೇಳದಲ್ಲಿ 1300ಕ್ಕಿಂತಲೂ ಹೆಚ್ಚು ಅಭ್ಯರ್ಥಿಗಳಿಗೆ ಉತ್ತಮ ಕಂಪನಿಗಳಲ್ಲಿ ಉದ್ಯೋಗ ಸಿಕ್ಕಿದೆ.
ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಅಶೋಕ ಕುಮಾರ್ ಶೆಟ್ಟಿ ಈ ಬಾರಿ 30 ಕಂಪನಿಗಳಲ್ಲಿ 1500 ಕ್ಕೂ ಮಿಕ್ಕಿ ಉದ್ಯೋಗ ಅವಕಾಶಗಳಿವೆ ಎಂದು ತಿಳಿದು ಬಂದಿದೆ ಎಂದು ಹೇಳಿದರು.
ಉದ್ಯೋಗ ಮೇಳ ಕಾರ್ಯಕ್ರಮವನ್ನು ನವೆಂಬರ್ ತಾ. 16 ರಂದು ಶನಿವಾರ -ಉಡುಪಿ ಗ್ರಾಮೀಣ ಬಂಟರ ಸಂಘ ದ ಚಾರಿಟೇಬಲ್ ಟ್ರಸ್ಟ್, ಕುಂತಳ ನಗರ, ಮಣಿಪುರ, ಉಡುಪಿ ಇವರ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್, ಆಶಾ ಪ್ರಕಾಶ್ ಶೆಟ್ಟಿ ಕನ್ವೆನ್ಷನ್ ಸೆಂಟರ್ ನಲ್ಲಿ ಡಾ. ಕೆ.ಪ್ರಕಾಶ್ ಶೆಟ್ಟಿ, ಛೇರ್ಮನ್, ಎಂ.ಆರ್.ಜಿ ಗ್ರೂಪ್ ಇವರು ಉದ್ಘಾಟನೆ ಮಾಡಲಿದ್ದಾರೆ.
ಜಾತಿ ಮತ ಬೇಧ ಇಲ್ಲದೆ ಎಲ್ಲಾ ಸಮುದಾಯದ ಯುವಕರಿಗೆ ಮತ್ತು ಮಹಿಳೆಯರಿಗೆ ಅವಕಾಶ ಇದ್ದು ರಿಜಿಸ್ಟ್ರೇಷನ್ ಫೀಸ್ ಇಲ್ಲ ಎಂದು ತಿಳಿಸಿದರು.
ಇಂಜಿನಿಯರಿಂಗ್, ಡಿಪ್ಲೋಮ ಮತ್ತು ಐ. ಟಿ. ಐ ಹಾಗೂ ಇನ್ನಿತರ ಕ್ಷೇತ್ರ ಗಳಲ್ಲಿ ಬಿಬಿಎಂ, ಬಿಎಸ್ಸಿ , ಬಿಕಾಂ , ಬಿಬಿಎ, ಎಂಎ, ಎಂಕಾಂ ,ಎಂ.ಎಸ್.ಸಿ, ಎಂ.ಬಿ.ಎ, ಎಂ.ಸಿ.ಎ ಮತ್ತು ಇನ್ನಿತರ ಈಗಾಗಲೇ ಕಲಿತ ಮತ್ತು ಅಂತಿಮ ವರ್ಷ ದಲ್ಲಿ ಕಲಿಯುವ ವಿದ್ಯಾರ್ಥಿ ಗಳಿಗೆ ಇಂಟರ್ವ್ಯೂ ನಲ್ಲಿ ಭಾಗವಹಿಸಲು ಅವಕಾಶ ಇದೆ ಎಂದು ವಿವರಿಸಿದರು.
ಟೀಚರ್ಸ್ ಪೋಸ್ಟ್ ಗೆ ಸುಮಾರು 65 ಹುದ್ದೆ ಗಳಿದ್ದು ಬಿಹೆಡ್, ಎಂ.ಸಿ.ಎ ಮಾಡಿದವರಿಗೆ ಅವಕಾಶ ಇದೆ. ಒಟ್ಟು 1630 ಇಂಜಿನಿಯರಿಂಗ್ ಮತ್ತು ಇನ್ನಿತರ ಬೇರೆ ಬೇರೆ ಫೀಲ್ಡ್ ಗಳಿಗೆ 30 ಕಂಪನಿ ಗಳಲ್ಲಿ ವಿವಿಧ ಹುದ್ದೆ ಗಳಿಗೆ ಅವಕಾಶ ಇದೆ ಎಂದು ತಿಳಿಸಿದರು.
ಅಭ್ಯರ್ಥಿಗಳ ರಿಜಿಸ್ಟ್ರೇಷನ್ 9 ಗಂಟೆಗೆ ಪ್ರಾರಂಭವಾಗುತ್ತೆ ಎಂದು ತಿಳಿಸಿದರು.

