ಉಡುಪಿ ನ.23: ಪಡುಬಿದ್ರಿಯ ಮುದರಂಗಡಿಯ ಸಂತೂರಿನಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದ 3 ವರ್ಷದ ಗಂಡು ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಶುಕ್ರವಾರ ರಕ್ಷಿಸಿದ್ದಾರೆ.
ಬೆಳಗ್ಗೆ 11 ರ ಸುಮಾರಿಗೆ ಕರುಣಾಕರ ಪೂಜಾರಿಯವರ ಮನೆಯ ಅಂಗಳದಲ್ಲಿರುವ ಬಾವಿಗೆ ಚಿರತೆ ಬಿದ್ದಿರುದು ಪತ್ತೆಯಾಗಿದೆ. ಕೂಡಲೇ ಗ್ರಾಮ ಪಂಚಾಯಿತಿ ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಅರಣ್ಯಾಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸುರಕ್ಷಿತವಾಗಿ ಹೊರತೆಗೆದು ಕೊಲ್ಲೂರು ಬಳಿಯ ಮೀಸಲು ಅರಣ್ಯಕ್ಕೆ ಪ್ರದೇಶಕ್ಕೆ ಬಿಡಲಾಯಿತು.
ಈ ರಕ್ಷಣಾ ಕಾರ್ಯವನ್ನು ನೋಡಲು ಸುತ್ತಮುತ್ತಲಿನ ನೂರಾರು ವೀಕ್ಷಕರು ಆಗಮಿಸಿದ್ದರು.
ಈ ಪ್ರದೇಶದಲ್ಲಿ ಚಿರತೆ, ಕಾಡೆಮ್ಮೆಗಳ ಕಾಟ ಹೆಚ್ಚಾಗಿದ್ದು, ಸ್ಥಳೀಯರು ಹೊರಗೆ ಬರಲು ಭಯಪಡುವಂತಾಗಿದೆ ಎಂದು ತಿಳಿಸಿದ್ದಾರೆ.
ರಕ್ಷಣಾ ಕಾರ್ಯದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಗುರುರಾಜ್ ನಾಯಕತ್ವದಲ್ಲಿ ವಾರಿಜಾ ನಾಯರಿ, ಅಖಿಲೇಶ್, ಕೇಶವ್, ಮಂಜುನಾಥ್, ಶರಣ್ ಮತ್ತು ಇಲಾಖೆಯ ಚಾಲಕರು ಭಾಗಿಯಾಗಿದ್ದರು.
ಕಾರ್ಯಾಚರಣೆಯ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಮಿತಾ, ಸದಸ್ಯರಾದ ರವೀಂದ್ರ ಪ್ರಭು, ಶಿವರಾಮ ಭಂಡಾರಿ, ಡೇವಿಡ್ ಡಿಸೋಜಾ, ಪಿಡಿಒ ಮುತ್ತು, ಖಾತೆ ಸಹಾಯಕ ಶಿವರಾಂ ಉಪಸ್ಥಿತರಿದ್ದರು.

