ಇಂದು ಮುಂಬೈ ಭಯೋತ್ಪಾದಕ ದಾಳಿಯ 16 ನೇ ವರ್ಷದ ಕರಾಳ ದಿನವಾಗಿದೆ, ಈ ದಾಳಿಯು ಸ್ವತಂತ್ರ ಭಾರತದ ಇತಿಹಾಸದಲ್ಲಿ ನಡೆದ ಅತಿ ಘೋರ ಭಯೋತ್ಪಾದಕ ದಾಳಿಗಳಲ್ಲಿ ಒಂದಾಗಿದೆ.
ಈ ಭಯೋತ್ಪಾದಕ ದಾಳಿಯಲ್ಲಿ, 18 ಮಂದಿ ಭದ್ರತಾ ಸಿಬ್ಬಂದಿಗಳನ್ನು ಸೇರಿದಂತೆ 166 ಮಂದಿ ಸಾವನ್ನಪ್ಪಿದ್ದರು ಹಾಗೂ 300 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ದೇಶದ ಅತ್ಯಂತ ಸುರಕ್ಷಿತ ಮತ್ತು ಪ್ರಸಿದ್ದ ಸ್ಥಳಗಳಲ್ಲಿ ಒಂದಾದ ಮುಂಬೈನ ತಾಜ್ ಹೋಟೆಲ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು.
ಮೀನುಗಾರರ ವೇಷದಲ್ಲಿ ಸಮುದ್ರ ಮಾರ್ಗವಾಗಿ ಮುಂಬೈ ಬಂದು ತಲುಪಿದ್ದ ಉಗ್ರರು, ಗುರುತನ್ನು ಮರೆಸಿಕೊಂಡು ಮುಂಬೈಗೆ ನುಸುಳಿದ ಉಗ್ರರು 3 ದಿನಗಳ ಕಾಲ ಹೋಟೆಲ್, ರೈಲ್ವೆ ನಿಲ್ದಾಣ, ಆಸ್ಪತ್ರೆ, ಯಹೂದಿ ಸಮುದಾಯದವರ ಕೇಂದ್ರ ಸೇರಿದಂತೆ 10ಕ್ಕೂ ಹೆಚ್ಚು ಕಡೆ ಬಾಂಬ್ ಮತ್ತು ಗುಂಡಿನ ದಾಳಿ ನಡೆಸಿದ್ದರು. ತಾಜ್, ಒಬೇರಾಯ್ ನಂತಹ ಹೋಟೆಲ್ಗಳು ಭಯೋತ್ಪಾದಕ ದಾಳಿ ಮತ್ತು ಬಾಂಬ್ ಬ್ಲಾಸ್ಟ್ಗೆ ಹೊತ್ತಿ ಉರಿದವು.
ಭಯೋತ್ಪಾದಕ ದಾಳಿಯ ವಿಚಾರ ತಿಳಿದೊಡನೆ ಜನರ ರಕ್ಷಣೆಗೆ ಪ್ರವೇಶಿಸಿದ ಪೋಲಿಸ್ ಅಧಿಕಾರಿಗಳಾದ ಹೇಮಂತ್ ಕರ್ಕರೆ, ವಿಜಯ್ ಸಾಲಸ್ಕರ್, ಅಶೋಕ್ ಕಾಮ್ಟೆ ಮತ್ತು ತುಕಾರಾಮ್ ಓಂಬ್ಳೆ ಮತ್ತು ಯೋಧ ಸಂದೀಪ್ ಉನ್ನಿಕೃಷ್ಣನ್ ಉಗ್ರರಿಂದ ಹತರಾದರು. ಈ ಭಯೋತ್ಪಾದಕ ಕೃತ್ಯವನ್ನು ಇಡೀ ಜಗತ್ತು ಖಂಡಿಸಿತ್ತು. ಉಗ್ರರು ಹಾರಿಸಿದ್ದ ಗುಂಡುಗಳು ಎದೆಯನ್ನು ಸೀಳಿದರೂ ಅಪ್ರತಿಮ ಶೌರ್ಯವನ್ನು ತೋರಿದ ತುಕಾರಾಮ್, ಕೊನೆಯುಸಿರಿರುವ ಹಂತದಲ್ಲಿದ್ದರೂ ಕಸಬ್ನ ಮೇಲೆ ಗುಂಡು ಹಾರಿಸಿ, ಆತನನ್ನು ಸೆರೆಹಿಡಿಯುವಂತೆ ಮಾಡಿದ್ದರು. ತುಕಾರಾಮ್ ಓಂಬ್ಳೆಯವರ ಈ ದೇಶ ಪ್ರೇಮಕ್ಕೆ ಭಾರತ ಸರ್ಕಾರವು 2009ರಲ್ಲಿ ಓಂಬ್ಳೆಯವರಿಗೆ ಅಶೋಕ ಚಕ್ರ ಗೌರವ ನೀಡಿ ಪುರಸ್ಕರಿಸಿದೆ.
ತುಕಾರಾಮ್ ಓಂಬ್ಳೆ

ಮೇಜರ್ ಸಂದೀಪ್ ಉನ್ನೀಕೃಷ್ಣನ್

ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಎನ್ಎಸ್ಜಿ ಯ ಕಮಾಂಡೋ ಆಗಿದ್ದ ಮೇಜರ್ ಸಂದೀಪ್ ಉನ್ನೀಕೃಷ್ಣನ್ ಮತ್ತು ಅವರ ತಂಡವು ಭಯೋತ್ಪಾದಕರೊಂದಿಗಿನ ಸೆಣೆಸಾಟದಲ್ಲಿ ಮುಂಚೂಣಿಯಲ್ಲಿತ್ತು. ಉಗ್ರರಿದ್ದ ತಾಜ್ ಹೋಟೆಲಿನ ಒಂದೊಂದೇ ಮಹಡಿಯನ್ನು ಎನ್ಎಸ್ಜಿ ಯೋಧರು ಸುತ್ತುವರಿಯುತ್ತಾ, ಒತ್ತೆಯಾಳಾಗಿದ್ದ ಜನರನ್ನು ರಕ್ಷಿಸುತ್ತಿದ್ದರು. ನ.28ರಂದು ಮೇಜರ್ ಸಂದೀಪ್ ಉನ್ನೀಕೃಷ್ಣನ್ ಉಗ್ರರ ಗುಂಡೇಟಿಗೆ ವೀರ ಮರಣ ಹೊಂದಿದರು. ಇವರ ಶೌರ್ಯವನ್ನು ಮೆಚ್ಚಿ ಭಾರತ ಸರ್ಕಾರವು ಸಂದೀಪ್ ಉನ್ನೀಕೃಷ್ಣನ್ ಅವರಿಗೆ ಮರಣೋತ್ತರವಾಗಿ ಅಶೋಕ ಚಕ್ರವನ್ನು ನೀಡಿ ಗೌರವಿಸಲಾಯಿತು.
ಈ ಭಯೋತ್ಪಾದಕ ದಾಳಿಯನ್ನು ನಡೆಸಿದ್ದ ಅಜ್ಮಲ್ ಕಸಬ್ನನ್ನು 2012 ನವೆಂಬರ್ 21ರಂದು ಪುಣೆಯ ಯೆರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.

