ದುರ್ಬಲ ಜ್ಞಾಪಕ ಶಕ್ತಿಯು ಓದುವಿಕೆ ಮತ್ತು ಗಣಿತ ಸೇರಿದಂತೆ ವಿವಿಧ ಕ್ಷೇತ್ರಗಳ ಕಲಿಕೆಯ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಮಕ್ಕಳಲ್ಲಿ ಜ್ಞಾಪಕಶಕ್ತಿಯನ್ನು ಹೆಚ್ಚಿಸುವುದು ಅತ್ಯವಶ್ಯಕವಾಗಿದೆ.
ವ್ಯಾಯಾಮ: ಮಕ್ಕಳಲ್ಲಿ ಪ್ರತಿದಿನ ವ್ಯಾಯಾಮ ಮಾಡುವ ಅಭ್ಯಾಸವನ್ನು ಬೆಳೆಸಿ, ಅದು ಅವರಿಗೆ ದೈಹಿಕವಾಗಿ ಸಕ್ರಿಯವಾಗಿರುವುದರೊಂದಿಗೆ ಮೆದುಳು ಚುರುಕಾಗಿರಲು ಸಹಾಯ ಮಾಡುತ್ತದೆ.
ಓದಲು ಪ್ರೋತ್ಸಾಹಿಸಿ : ಟಿಪ್ಪಣಿಗಳನ್ನು ತಯಾರಿಸುಹುದು ಮತ್ತು ಪದಗಳನ್ನು ಅಂಡರ್ಲೈನ್ ಮಾಡಿಕೊಂಡು ಓದುವುದು ಮಕ್ಕಳಲ್ಲಿ ದೀರ್ಘಕಾಲದವರೆಗೆ ಮಾಹಿತಿಯನ್ನು ಉಳಿಸಿಕೊಳ್ಳಲು ಸಹಾಯವಾಗುತ್ತದೆ. ಜೋರಾಗಿ ಓದುವುದು ನೆನಪಿನ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸುವ ಸಹಕಾರಿಯಾಗುತ್ತದೆ.
ಸಣ್ಣ ವಿರಾಮಗಳಿರಲಿ : ಮಕ್ಕಳು ಮಾನಸಿಕವಾಗಿ ವಿರಾಮವನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿರುತ್ತದೆ. ನೀರು ಕುಡಿಯುವುದು, ಎದ್ದು ನಿಲ್ಲುವುದು, ನಡೆಯುವುದು ಇಂತಹ ಸರಳ ಕ್ರಿಯೆಗಳು ಮಗುವಿನ ಮೆದುಳನ್ನು ಪುನರುಜ್ಜೀವನಗೊಳಿಸಲು ಸಹಾಯಕವಾಗಿದೆ.
ಪೋಷಕಾಂಶಗಳು : ಮಕ್ಕಳು ಒಮೆಗಾ-3 (Omega-3)ಕೊಬ್ಬಿನಾಮ್ಲ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸಿದಾಗ ನೆನಪಿನ ಶಕ್ತಿಯು ಗಣನೀಯವಾಗಿ ಹೆಚ್ಚುತ್ತದೆ. ಮಕ್ಕಳಿಗೆ ನೀಡುವ ಸಕ್ಕರೆ ಮತ್ತು ಹೆಚ್ಚಿನ ಕ್ಯಾಲೋರಿ ಆಹಾರವನ್ನು ತಪ್ಪಿಸಬೇಕು. ಇದು ಮಗುವಿನ ಜ್ಞಾಪಕ ಶಕ್ತಿಯ ಬೆಳವಣಿಗೆಗೆ ಮತ್ತಷ್ಟು ಸಹಾಯ ಮಾಡುತ್ತದೆ.

