ಚೈತ್ರ ಕುಂದಾಪುರ ಅವರು ಬಿಗ್ಬಾಸ್ ರಿಯಾಲಿಟಿ ಶೋಯಿಂದ ನೇರವಾಗಿ ನ್ಯಾಯಾಲಯಕ್ಕೆ ಬಂದಿದ್ದಾರೆ. ವಾರಂಟ್ ರೀಕಾಲ್ ಮಾಡಿ ಮತ್ತೆ ಬಿಗ್ ಬಾಸ್ ಮನೆಗೆ ಅವರು ತೆರಳಿದ್ದಾರೆ. ಕೋರ್ಟ್ ಜನವರಿ 13ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಅಲ್ಲಿಯವರೆಗೆ ಚೈತ್ರಾ ಬಿಗ್ ಬಾಸ್ ಮನೆಯೊಳಗೆ ಇದ್ದರೆ ಮತ್ತೊಮ್ಮೆ ವಿಚಾರಣೆಗೆ ಹಾಜರಾಗಬೇಕಾಗುತ್ತದೆ.
ಕುಂದಾಪುರದ ಉದ್ಯಮಿಯಾದ ಗೋವಿಂದಬಾಬು ಪೂಜಾರಿ ಅವರಿಗೆ ವಂಚಿಸರುವ ಆರೋಪ ಚೈತ್ರಾ ಅವರ ಮೇಲೆ ಇದೆ. ಟಿಕೆಟ್ ಕೊಡಿಸೋದಾಗಿ ನಂಬಿಸಿ ಚೈತ್ರಾ ಅವರು ಗೋವಿಂದಬಾಬು ಪೂಜಾರಿಯವರ ಬಳಿ ಐದು ಕೋಟಿ ರೂಪಾಯಿ ಪಡೆದು ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಚೈತ್ರಾ, ಶ್ರೀಕಾಂತ್ ಸೇರಿ ಮೂವರು ಆರೋಪಿಗಳು ಕೋರ್ಟ್ ಗೆ ಹಾಜರು ಆಗಿದ್ದಾರೆ.
ಕಳೆದ ವರ್ಷ ಬಿಗ್ ಬಾಸ್ ಮನೆಯ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಅವರು ಹುಲಿ ಉಗುರಿನ ಕೇಸ್ ನಲ್ಲಿ ಒಂದು ವಾರ ಜೈಲಿನಲ್ಲಿದ್ದು ವಾಪಸ್ ಬಿಗ್ ಬಾಸ್ ಮನೆಗೆ ಬಂದಿದ್ದರು.

