ಬ್ರಹ್ಮಾವರ : ಬ್ರಹ್ಮಾವರದ ಕಾಡೂರು ಗ್ರಾಮದ ಮುಂಡಾಡಿ ರಾಮಚಂದ್ರ ಆಚಾರಿ ಅವರ ಮನೆ ಮೇಲೆ ಸಿಡಿಲು ಬಡಿದು ಅಪಾರ ಹಾನಿ ಸಂಭವಿಸಿದೆ.

ಫೆಂಗಾಲ್ ಚಂಡಮಾರುತದ ಪರಿಣಾಮವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹಲವೆಡೆ ಸಿಡಿಲಿನ ಅಬ್ಬರದೊಂದಿಗೆ ಭಾರೀ ಮಳೆ ಸುರಿದಿದೆ.

ಸಿಡಿಲಿನ ಅಬ್ಬರಕ್ಕೆ ಬ್ರಹ್ಮಾವರದ ಕಾಡೂರು ಗ್ರಾಮದ ಮುಂಡಾಡಿ ರಾಮಚಂದ್ರ ಆಚಾರಿ ಮನೆಯ ಹಂಚುಗಳು ಒಡೆದು ಅಪಾರ ಹಾನಿಯಾಗಿದೆ ಮತ್ತು ವಯರಿಂಗ್ ಸಹಿತ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಹೋಗಿದ್ದು, ಮನೆಯ ಗೋಡೆಗಳು ಹಾನಿಗೀಡಾಗಿದೆ.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಲಂಧರ ಶೆಟ್ಟಿ, ಪಿಡಿಒ ಮಹೇಶ್ ಮತ್ತು ಇತರರು ಸ್ಥಳಕ್ಕೆ ಭೇಟಿ ನೀಡಿ ತುರ್ತು ಪರಿಹಾರ ದೊರಕಿಸುವುದಾಗಿ ಭರವಸೆ ನೀಡಿದ್ದಾರೆ.


