ಉಡುಪಿ : ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ-66ರ ರಸ್ತೆ ಕಾಮಗಾರಿಯು ಸೋಮವಾರದಿಂದ ಪ್ರಾರಂಭವಾಗಿದ್ದು, ಇದು ಪೂರ್ಣಗೊಳ್ಳುವವರೆಗೂ ಎಲ್ಲ ವಾಹನಗಳಿಗೆ ಬದಲೀ ಮಾರ್ಗ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಕರಾವಳಿ ಇಂದ ಅಂಬಲಪಾಡಿ ಸ್ವಾಗತ ಗೋಪುರದ ಕಡೆಗೆ ಹಾದುಹೋಗಿರುವ ಸರ್ವಿಸ್ ರಸ್ತೆಯಲ್ಲಿ ಏಕಮುಖವಾಗಿ ವಾಹನಗಳು ಸಂಚರಿಸಬೇಕು. ಬ್ರಹ್ಮಗಿರಿ ಇಂದ ಅಂಬಲಪಾಡಿ – ಕಿದಿಯೂರು ಕಡೆಗೆ ಸಾಗುವ ವಾಹನಗಳು ಬ್ರಹ್ಮಗಿರಿ – ಕಾಂಗ್ರೆಸ್ ಭವನ – ಅಗ್ನಿಶಾಮಕ ದಳದ ಕಡೆಯಿಂದ ಸ್ವಾಗತ ಗೋಪುರದವರೆಗೆ ಬಂದು ಅನಂತರವಾಗಿ ಸರ್ವಿಸ್ ರಸ್ತೆಯಿಂದ ಅಂಬಲಪಾಡಿಯ ಕಡೆಗೆ ಹೋಗಬೇಕು. ಬ್ರಹ್ಮಗಿರಿ ಇಂದ ಅಂಬಲಪಾಡಿ – ಕರಾವಳಿ ಗೆ ಸಾಗುವ ವಾಹನಗಳು ಬ್ರಹ್ಮಗಿರಿಯಿಂದ, ಪೊಲೀಸ್ ಅಧೀಕ್ಷಕರ ಕಚೇರಿ ರಸ್ತೆಯಿಂದ ಬನ್ನಂಜೆ ಕಡೆಗೆ ಹೋಗುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

