ಬ್ರಹ್ಮಾವರ : ಕುದಿ ಗ್ರಾಮದ ಸೀತಾ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆದಿರುವುದು ಪತ್ತೆಯಾಗಿದೆ. ಮಂಜುನಾಥ ಅವರ ಸೂಚನೆಯಂತೆ ಜೆಸಿಬಿಯ ಮುಖಾಂತರ ಟಿಪ್ಪರ್ಗೆ ಮರಳನ್ನು ತುಂಬಿಸಿ ಸಾಗಿಸುತ್ತಿದ್ದರು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಬ್ರಹ್ಮಾವರದ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.

