ಕುಂದಾಪುರ: ಸಾರ್ವಜನಿಕ ಚರಂಡಿಯನ್ನು ಮುಚ್ಚಿದ ಘಟನೆ ಕುಂದಾಪುರ ಪುರಸಭೆ ವ್ಯಾಪ್ತಿಯ ವಿಠಲವಾಡಿ ರಸ್ತೆಯ ಮೈನಾಡಿ ಎಂಬಲ್ಲಿ ನಡೆದಿದೆ.

ವಿಠಲವಾಡಿಯ ಮೈನಾಡಿಯಲ್ಲಿ ಆನಾದಿ ಕಾಲದಿಂದಲೂ ಇದ್ದ ಚರಂಡಿಯನ್ನು ಪಕ್ಕದ ಜಾಗದ ಶ್ರೀನಿವಾಸ್ ಶೆಟ್ಟಿ ಎಂಬವರು ಚರಂಡಿಗೆ ಅಡ್ಡಲಾಗಿ ಕೆಂಪು ಕಲ್ಲುಗಳನ್ನು ಸಿಮೆಂಟ್ ನಿಂದ ಕಟ್ಟಿ ಚರಂಡಿಯನ್ನು ಮುಚ್ಚಿ ಮಳೆಗಾಲದಲ್ಲಿ ಹರಿಯುವ ನೀರನ್ನು ತಡೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಸಾರ್ವಜನಿಕರು ಇದರ ಬಗ್ಗೆ ತಿಳಿ ಹೇಳಿದರು ಯಾವುದೇ ಪ್ರಯೋಜನವಾಗಲಿಲ್ಲ, ಆ ಜಾಗದಲ್ಲಿ ಸುತ್ತಲು ಕಾಂಪೌಂಡ್ ನಿರ್ಮಿಸುತ್ತಿದ್ದು, ಇದಕ್ಕೂ ಕೂಡ ಪುರಸಭೆಯ ಅನುಮತಿ ಪಡೆದಿಲ್ಲ ಎನ್ನಲಾಗಿದೆ. ಸದ್ಯ ಪುರಸಭೆಯ ಅಧಿಕಾರಿಗಳು ಬಂದು ಸ್ಥಳ ಪರಿಶೀಲಿಸಿದ್ದಾರೆ.



