ಹೊನ್ನಾವರ: ಮುರುಡೇಶ್ವರ ಜಾತ್ರೆ ಮುಗಿಸಿ ಮನೆಗೆ ಬರುತ್ತಿದ್ದ ಬೈಕಿಗೆ ಕಾರು ಡಿಕ್ಕಿಯಾದ ಪರಿಣಾಮ ಸಹ ಸವಾರೆ ಪೂಜಾ ಗೌಡ ಸಾವನಪ್ಪಿದ ಘಟನೆ ನಡೆದಿದೆ.

ಹೊನ್ನಾವರದ ಅಪ್ಪಿಕೆರಿ ಪೂಜಾ ಗೌಡ ಹಾಗೂ ಸುರೇಶ ಗೌಡ ಭಾನುವಾರ ಮುರುಡೇಶ್ವರದ ಜಾತ್ರೆಗೆ ಹೋಗಿದ್ದರು. ಸೋಮವಾರ ಮರಳಿ ಊರ ಕಡೆ ಹೊರಟಿದ್ದರು. ಶರಾವತಿ ಸೇತುವೆ ಮೇಲೆ ಅವರ ಬೈಕಿಗೆ ಕಾರು ಡಿಕ್ಕಿಯಾಗಿದೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ರಭಸಕ್ಕೆ ಕಾರು ಹಾಗೂ ಬೈಕ್ ಎರಡೂ ಜಖಂ ಆಗಿದೆ.



