ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66 ರ ಕಟಪಾಡಿ ಜಂಕ್ಷನ್ ನಲ್ಲಿ ದಿನೇ ದಿನೇ ವಾಹನ ದಟ್ಟನೆ ಹೆಚ್ಚುತ್ತಿದ್ದು, ಸುಗಮ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಕಟಪಾಡಿ ಇನ್ವೆಂಜರ್ ಫೌಂಡೇಶನ್, ರೋಟರಿ ಕ್ಲಬ್ ವತಿಯಿಂದ ವಿನೂತನ ಮಾದರಿಯಲ್ಲಿ ರಸ್ತೆ ಜನಜಾಗೃತಿ ಕಾರ್ಯಕ್ರಮ ನಡೆಯಿತು.

ಕಲಾವಿದ ರಂಜಿತ್ ಕೋಟ್ಯಾನ್ ಕಟಪಾಡಿ ಯಮಧರ್ಮನ ವೇಷದಲ್ಲಿ ಹೆದ್ದಾರಿಯಲ್ಲಿ ರಸ್ತೆ ಸುರಕ್ಷತೆ, ಬೈಕ್ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸುವ ಬಗ್ಗೆ ಜನಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದರು.

ರೋಟರಿ ಸಂಸ್ಥೆಯ ರಸ್ತೆ ಸುರಕ್ಷತಾ ಜಿಲ್ಲಾ ಚೇರ್ಮನ್ ಕೆ. ಸತ್ಯೇಂದ್ರ ಪೈ ಅವರ ನೇತೃತ್ವದಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ ಕಿರುಚಿತ್ರ, ಕೈಪಿಡಿ ರಚನೆ ನಡೆಸಲು ಈ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.

ಸಾರ್ವಜನಿಕ ವಲಯ ಹಾಗೂ ಪೊಲೀಸ್ ಇಲಾಖೆಯಿಂದ ಪ್ರಶಂಸೆ ವ್ಯಕ್ತವಾಗಿದೆ.


