ಮಂಗಳೂರಿನ ಮಸಾಜ್ ಸೆಂಟರ್ ಒಂದರಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದ ಆರೋಪದಲ್ಲಿ ರಾಮ ಸೇನೆಯ ಕಾರ್ಯಕರ್ತರು ದಾಳಿ ನಡೆಸಿ ಪೀಠೋಪಕರಣಗಳನ್ನು ದ್ವಂಸಗೊಳಿಸಿರುವ ಘಟನೆ ಇಂದು ನಡೆದಿದೆ.
ನಗರದ ಬಿಜೈ KSRTC ಬಳಿ ಇರುವ ಮಸಾಜ್ ಸೆಂಟರ್ ಮೇಲೆ ಪ್ರಸಾದ್ ಅತ್ತಾವರ ನೇತೃತ್ವದ ರಾಮ ಸೇನಾ ಸಂಘಟನೆ ದಾಳಿ ನಡೆಸಿದೆ.
ಮಂಗಳೂರು ನಗರದಾದ್ಯಂತ ಇರುವ ಮಸಾಜ್ ಸೆಂಟರ್ ಗಳನ್ನು ಮುಚ್ಚುವಂತೆ ರಾಮ ಸೇನೆ ಆಗ್ರಹಿಸಿದೆ.






