ಉಡುಪಿ : ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥರು ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಕೈಗೊಂಡಿದ್ದಾರೆ. ಬಳಿಕ ಪಟ್ಟದ ದೇವರ ಪೂಜೆ ನಡೆಸಿ ವಿಶ್ವ ಹಿಂದೂ ಪರಿಷತ್ ನಡೆಸಿದ ಸಂತ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.

ಪುಣ್ಯ ನದಿಗಳ ಸ್ಮರಣೆಯಿಂದಲೇ ಪುಣ್ಯಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ದೇವರ ಪಾದಸ್ಪರ್ಶದಿಂದಲೇ ಭಾರತದ ಪುಣ್ಯ ನದಿಗಳು ಹರಿದು ಬರುತ್ತವೆ ಎಂಬ ನಂಬಿಕೆ ಇದೆ. ಕುಂಭಮೇಳದಲ್ಲಿ ಪುಣ್ಯಸ್ನಾನ ಕೈಗೊಳ್ಳುವ ಮೂಲಕ ಭಕ್ತರು ಪುನೀತರಾಗಬೇಕು ಎಂದರು.




