ಉಡುಪಿ: ಸ.ಹಿ.ಪ್ರಾ. ಶಾಲೆ ಹೊಸಾಳ ಇಲ್ಲಿ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.

ಧ್ವಜಾರೋಹಣವನ್ನು ಹಿರಿಯ ಉದ್ಯಮಿ ವೈ.ಜಿ ಕಾಮತ್ ಬಾರ್ಕೂರು ನೆರವೇರಿಸಿದರು.

ಮಂಜುನಾಥ ಆಚಾರ್ಯ ಅಧ್ಯಕ್ಷರು, ಎಸ್.ಡಿ.ಎಮ್. ಸಿ., ಉಷಾ ರಾಘವೇಂದ್ರ, ಉಪಾಧ್ಯಕ್ಷೆ ಎಸ್.ಡಿ.ಎಮ್.ಸಿ, ಅಲ್ಬರ್ಟ್ ರೋಡ್ರಿಗಸ್, ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ, ಎಸ್.ಡಿ.ಎಮ್.ಸಿ ಸದಸ್ಯರು, ಪೋಷಕರು ಭಾಗವಹಿಸಿದ್ದರು.

ಮುಖ್ಯೋಪಾಧ್ಯಾಯ ಶ್ಯಾಮಸುಂದರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಗೀತಾ ವಂದಿಸಿದರು. ಪಾರ್ವತಿ ಸಹಕರಿಸಿದರು. ಸಮೃದ್ಧಿ ಇಕೋ ಕ್ಲಬ್ ತಂಡದಿಂದ ಸ್ವಚ್ಛ ತಾ ಅಭಿಯಾನ ಕಾರ್ಯಕ್ರಮ ಜರುಗಿತು.



