ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ್ ಮತ್ತು ಧನ್ಯತಾ ಅವರ ಮದುವೆ ಅನೇಕ ಸಂಪ್ರದಾಯಗಳ ಜೊತೆ ಶಾಸ್ತ್ರೋಕ್ತವಾಗಿ ನಡೆದಿದೆ. ಇದರ ಮಧ್ಯೆ ಧನಂಜಯ್ ಅವರು ಕೆಂಡ ತುಳಿಯುವ ಒಂದು ಪದ್ಧತಿಯನ್ನು ಆಚರಿಸಿದ್ದು ಅವರ ಚಿಕ್ಕಪ್ಪ ಈ ಮುನ್ನ ಪೂಜೆಯನ್ನು ಕೂಡಾ ಮಾಡಿದ್ದಾರೆ. ಈ ಬಗ್ಗೆ ಅನೇಕ ವ್ಯಂಗ್ಯ ಮಾತುಗಳು ಕೇಳಿಬರುತ್ತಿದೆ.
ನೇರವಾಗಿ ಕೇಳದೆ ಇದ್ದರೂ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಗುಸುಗುಸು ಶುರುವಾಗಿದೆ. ಧನಂಜಯ್ ಮೂಢನಂಬಿಕೆಯನ್ನು ಟೀಕಿಸುತ್ತಾರೆ. ಮತ್ತು ಆಸ್ತಿಕರು, ನಾಸ್ತಿಕರು ಎಂಬ ವಿಚಾರದ ಬಗ್ಗೆಯೂ ಮಾತನಾಡುತ್ತಿರುತ್ತಾರೆ. ಇದೀಗ ಇವರ ಮೇಲೆ ವ್ಯಕ್ತವಾದ ಟೀಕೆಗಳಿಗೆ ಮುಟ್ಟಿ ನೋಡುವಂಥ ಉತ್ತರವನ್ನು ಡಾಲಿ ಕೊಟ್ಟಿದ್ದಾರೆ.
ಮೂಢನಂಬಿಕೆಗಳು ಮತ್ತು ನಂಬಿಕೆಗಳು ಬೇರೆಬೇರೆಯಾಗಿರುತ್ತದೆ. ಹಿರಿಯರು ಪಾಲಿಸಿಕೊಂಡು ಬಂದ ಆಚರಣೆಗಳನ್ನು ಮಾಡುವುದರಲ್ಲಿ ತಪ್ಪೇನಿದೆ. ಅದು ತಪ್ಪು ಅಂತ ನನಗೆ ಅನಿಸೋದೇ ಇಲ್ಲ ಎಂದಿದ್ದಾರೆ.
ನನ್ನಮ್ಮನಿಗೆ ಒಂದು ಸರ್ಜರಿ ಇತ್ತು. ಅದನ್ನು ವೈದ್ಯರೇ ಮಾಡಬೇಕಿತ್ತು. ಆದರೂ ನನ್ನಮ್ಮ ಆಪರೇಷನ್ ಮಾಡಿಸೋ ಮೊದ್ಲು ಜೇನುಕಲ್ಲು ಸಿದ್ದಪ್ಪನಿಗೆ ಕೈ ಮುಗಿದರು. ಹಾಗೆ ಮಾಡ್ಬೇಡ ಅಂತ ಹೇಳೋಕಾಗುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.
ಮಾತನಾಡೋಕೆ ಕುಳಿತ್ರೆ ಸಾಕಷ್ಟು ವಿಷಯಗಳೂ ಇವೆ. ಆದರೆ, ಈಗ ಮಾತ್ ಆಡ್ತಾನೇ ಕುಳಿತವರಯ ಮದುವೆ ಮಾಡೋಕೆ ಆಗೋದಿಲ್ಲ. ಆದರೆ, ಒಂದು ವಿಷಯ ಹೇಳಬೇಕಿದೆ. ನಾನು ಒಬ್ಬ ಕಲಾವಿದ ಆಗಿದ್ದೇನೆ. ನನಗೆ ಎಲ್ಲರ ಅಭಿಪ್ರಾಯ ಬೇಕಾಗುತ್ತದೆ. ಎಲ್ಲರ ಅನುಭವವೂ ಬೇಕಾಗುತ್ತದೆ ಅಂತಲೂ ಡಾಲಿ ಧನಂಜಯ್ ಹೇಳಿಕೊಂಡಿದ್ದಾರೆ.

