ಕಾಪು:- ಕಾಪು ಬೀಚ್ ನಲ್ಲಿ ಮಧ್ಯರಾತ್ರಿ ಐವರು ಕಿಡಿಗೇಡಿಗಳು ಅಲ್ಲಿದ್ದ ಅಂಗಡಿಗಳಿಗೆ ಹಾನಿ ಮಾಡಿದ್ದಾರೆ. ಕಂಠಪೂರ್ತಿ ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಡ್ಡಾಡಿಕೊಂಡು ಬಂದ ಇವರು ಅಂಗಡಿ ಮುಂಭಾಗದಲ್ಲಿ ಇರಿಸಲಾಗಿದ್ದ ಸೊತ್ತುಗಳಿಗೆ ಹಾನಿ ಮಾಡಿದ್ದಾರೆ. ಅಲ್ಲದೆ ರಸ್ತೆಯಲ್ಲಿದ್ದ ಕಲ್ಲುಗಳನ್ನು ಎಸೆದು ಗಾಜುಗಳನ್ನು ಪುಡಿ ಮಾಡಿದ್ದಾರೆ.
ಪುಂಡಾಟ ಮೆರೆದ ಈ ಐವರ ವಿರುದ್ಧ ಅಂಗಡಿ ಮಾಲೀಕರು ಕ್ರಮಕ್ಕೆ ಆಗ್ರಹಿಸಿದ್ದಾರೆ. ಅನೇಕ ರೀತಿಯಲ್ಲಿ ಹಾನಿಯಾಗಿದೆ ಎಙದು ಕೂಡಾ ದೂರಿದ್ದಾರೆ. ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

