ಆರೋಗ್ಯವೇ ಭಾಗ್ಯ ಎನ್ನುವಂತ ಮಾತಿದೆ. ಆರೋಗ್ಯ ಕೈ ಕೊಟ್ಟರೆ ಏನೇ ಕೆಲಸ ಮಾಡಲು ಸಾಧ್ಯವಾಗೋದಿಲ್ಲ. ಇತ್ತೀಚಿನ ದಿನಗಳಲ್ಲಂತೂ ಮನುಷ್ಯ ಒಂದಲ್ಲ ಒಂದು ಒತ್ತಡ, ಡಿಪ್ರೆಷನ್ ನಿಂದ ಬಳಲುತ್ತಿರುತ್ತಾರೆ. ಕೆಲವರಿಗೆ ನಿದ್ರಾಹೀನತೆ ಕೂಡಾ ಹೆಚ್ಚಿರುತ್ತದೆ. ರಾತ್ರಿ ನಿದ್ರೆ ಬರದೆ ಕಿರಿಕಿರಿ ಅನುಭವಿಸುವ ಸಾಕಷ್ಟು ಜನ ನಮ್ಮ ಮಧ್ಯೆ ಇರುತ್ತಾರೆ. ಇದಕ್ಕೆ ಅನೇಕ ಕಾರಣಗಳಿರಬಹುದು. ಆದರೆ ನಮ್ಮ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿ ನಮ್ಮದೇ ಆಗಿರುತ್ತದೆ.
ವೈದ್ಯರ ಅಭಿಪ್ರಾಯ ಮತ್ತು ಅಧ್ಯಯನದ ಪ್ರಕಾರ ಕಿವಿ ಹಣ್ಣು ಸೇವನೆ ಮಾಡುವುದರಿಂದ, ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ ಎಂದು ಹೇಳಲಾಗಿದೆ. ಆದರೆ ಜಾಲತಾಣದಲ್ಲಿ ಸಿಗುವ ಇಂತಹ ಮಾಹಿತಿಯನ್ನು ಕಣ್ಣು-ಮುಚ್ಚಿ ನಂಬಲು ಕೂಡ ಸಾಧ್ಯವಿಲ್ಲ. ಆದ್ದರಿಂದ ಈ ಮಾಹಿತಿಯ ಹಿಂದಿರುವ ಸತ್ಯಾಸತ್ಯಯನ್ನು ತಿಳಿದುಕೊಳ್ಳಲು ಪ್ರಯತ್ನಿಸಿದೆ. ವಾರಗಳ ಕಾಲ ರಾತ್ರಿ ಮಲಗುವ ಮೊದಲು ಎರಡು ಕಿವಿಗಳನ್ನು ತಿಂದರೆ,ನಿದ್ರೆಯ ಗುಣಮಟ್ಟ ಮತ್ತು ಅವಧಿ ಎರಡೂ ಸುಧಾರಿಸಬಹುದು. ಇದರಲ್ಲಿರುವ ಸಿ ಮತ್ತು ಬಿ ವಿಟಮಿನ್ ಅಂಶಗಳು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಕಾರ್ಟಿಸೋಲ್ ಎಂಬ ಹಾರ್ಮೋನ್ ಅನ್ನು ಸಮತೋಲನವನ್ನು ಕಾಯ್ದುಕೊಳ್ಳುತ್ತದೆ.
ಕಿವಿ ಹಣ್ಣಿನಿಂದ ರಕ್ತ ಶುದ್ಧೀಕರಣವಾಗುವುದರ ಜೊತೆಗೆ ರಕ್ತ ಸಂಚಲನೆ ಕೂಡಾ ಸರಾಗವಾಗಿ ನಡೆಯುತ್ತದೆ. ಹೀಗೆ ಈ ಹಣ್ಣಿನಿಂದ ಅನೇಕ ಲಾಭವಿದ್ದು ನಿದ್ರಾಹೀನತೆ ಸಮಸ್ಯೆ ಇರುವವರು ಕೂಡಾ ಇದನ್ನು ತೆಗೆದುಕೊಳ್ಳುತ್ತಾರೆ.

