ಕಾಂತಾರ ಖ್ಯಾತಿಯ ಸ್ಟಾರ್ ನಟ ರಿಷಬ್ ಶೆಟ್ಟಿ ನಟನೆ ಮಾಡಿರುವ ದಿ ಫ್ರೈಡ್ ಆಫ್ ಭಾರತ್ – ಛತ್ರಪತಿ ಶಿವಾಜ್ ಮಹಾರಾಜ್ ಸಿನಿಮಾದಿಂದ ಬಿಗ್ ಅಪ್ಡೇಟ್ ಬಂದಿದೆ. ಇಂದು ಮರಾಠ ಚಕ್ರವರ್ತಿಯ ಮುನ್ನೂರ ತೊಂಬತ್ತೈದನೇ ಜನ್ಮ ದಿನಾಚರಣೆಯ ಅಂಗವಾಗಿ ದಿ ಫ್ರೈಡ್ ಆಫ್ ಇಂಡಿಯಾ- ಛತ್ರಪತಿ ಶಿವಾಜ್ ಮಹಾರಾಜ್ ಸಿನಿಮಾದ ಫಸ್ಟ್ ಲುಕ್ ಔಟ್ ಆಗಿದೆ.
ಸ್ಟಾರ್ ಡೈರೆಕ್ಟರ್ ಸಂದೀಪ್ ಸಿಂಗ್ ಈ ಚಿತ್ರದ ಸಾರಥ್ಯ ವಹಿಸಲಿದ್ದಾರೆ. ಮರಾಠ ನಾಯಕ ಭವಾನಿ ದೇವಿಯ ಮುಂದೆ ನಿಂತಿರುವ ಪೋಸ್ಟರ್ ನ್ನು ಚಿತ್ರತಂಡ ಹಂಚಿಕೊಂಡಿದೆ. ನಿರ್ದೇಶಕ ಸಂದೀಪ್ ಸಿಂಗ್ ಅವರು ಭವಾನಿ, ಜೈ ಶಿವಾಜಿ, ಹರಹರ ಮಹಾದೇವ. ನಾವು ಹೆಮ್ಮೆಯಿಂದ ಮೊದಲ ಲುಕ್ವನ್ನು ಪ್ರಸ್ತುತಪಡಿಸುತ್ತಿದ್ದೇವೆ. ಇಡೀ ಖಂಡದ ಹಣೆಬರಹವನ್ನು ಬದಲಾಯಿಸಿದ ದಂತಕಥೆಯ ರಾಜನ ಶಕ್ತಿ ಮತ್ತು ಭಕ್ತಿಯನ್ನು ಪ್ರದರ್ಶಿಸುತ್ತೇವೆ. 21 ಜನವರಿ 2027 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಬರೆದುಕೊಂಡಿದ್ದಾರೆ.
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಪ್ರಸ್ತುತ ‘ಕಾಂತಾರ’ ಪ್ರೀಕ್ವೆಲ್ ಕೆಲಸದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇದು 2022ರ ಬ್ಲಾಕ್ಬಸ್ಟರ್ ‘ಕಾಂತಾರ’ ಚಿತ್ರದ ಮುಂದುವರಿದ ಭಾಗವಾಗಿದ್ದು ಪ್ರೀಕ್ವೆಲ್ ಇದೇ ಸಾಲಿನ ಅಕ್ಟೋಬರ್ 2ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಈ ಚಿತ್ರದ ಜೊತೆಗೆ ಅವರು ಪ್ರಶಾಂತ್ ವರ್ಮಾ ನಿರ್ದೇಶನದ ‘ಜೈ ಹನುಮಾನ್’ ಚಿತ್ರದಲ್ಲೂ ಕೆಲಸ ಮಾಡುತ್ತಿದ್ದಾರೆ. ಸದ್ಯ ಛತ್ರಪತಿ ಶಿವಾಜಿ ಮಹಾರಾಜ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಅಭಿಮಾನಿಗಳಿಂದ ಉತ್ತಮ ಸ್ಪಂದನೆ ಸಿಕ್ಕಿದೆ.

