ಹೆಣ್ಣಿಲ್ಲದೆ ಜೀವವಿಲ್ಲ, ಹೆಣ್ಣಿಲ್ಲದೆ ಜೀವನವಿಲ್ಲ. ಹೆಣ್ಣಿನಿಂದಲೇ ಬಾಳು ಬಂಗಾರ, ಹೆಣ್ಣಿಲ್ಲದ ಬದುಕು ನಿಸ್ವರ, ಹೆಣ್ಣನ್ನು ಗೌರವಿಸಿ ಹೆಣ್ಣು ಮಕ್ಕಳನ್ನು ರಕ್ಷಿಸಿ. ಪ್ರತೀ ವರ್ಷ ಮಾರ್ಚ್ 8ರಂದು ವಿಶ್ವದಾದ್ಯಂತ ಹೆಚ್ಚು ರಾಷ್ಟ್ರಗಳಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ಜಾಗತಿಕವಾಗಿ ಇಂದು ಹಲವು ಆಚರಣೆಗಳನ್ನು ಮರೆಯದೇ ಆಚರಿಸಲಾಗುತ್ತಿದೆ. ಅಂತಹ ಕೆಲವು ದಿನಗಳ ಪೈಕಿ ಅಂತರಾಷ್ಟ್ರೀಯ ಮಹಿಳಾ ದಿನವು ಸಹ. ಅದು ಸಹ ಪ್ರತಿ ಮಾರ್ಚ್ 08 ರಂದೇ ಈ ದಿನವನ್ನು ಸಂಭ್ರಮಿಸುವುದು
ಏನೇ ಹೊಸತನ ತಂದರೂ ಸಹ ಸಮಾಜದಲ್ಲಿಯ ಹಲವು ಕೊಡುಗೆಗಳನ್ನು, ಹಲವು ಇತಿಹಾಸಗಳನ್ನು, ಸಂಗತಿಗಳನ್ನು ಎಂದಿಗೂ ಮರೆಸಲು ಸಾಧ್ಯವಿಲ್ಲ. ಅಂತಹ ಕೆಲವುಗಳಲ್ಲಿ ಈ ಮಹಿಳಾ ದಿನವು ಸಹ ಒಂದು.
ಮಾರ್ಚ್ 8 ರಂದೇ ಮಹಿಳಾ ದಿನ ಆಚರಣೆ ಮಾಡಲಾಗುವುದು ಏಕೆ ಎಂಬ ಪ್ರಶ್ನೆ ಹಲವರಿಗೆ ಇದೆ. ಅದನ್ನು ಪ್ರತಿ ವರ್ಷವು ನೆನಪು ಮಾಡುವುದು ಸಾಮಾಜಿಕ ಕಳಕಳಿಯಿಂದ ಒಂದು ಜವಾಬ್ದಾರಿ ಎಂದು ನಾವು ಭಾವಿಸಿದ್ದೇವೆ. ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ ತಂತ್ರಜ್ಞಾನ, ಆರ್ಥಿಕ, ರಾಜಕೀಯ, ರಕ್ಷಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅವರ ಕೊಡುಗೆಯನ್ನು ಸ್ಮರಿಸಲು, ಗೌರವಿಸಲು ಈ ದಿನವನ್ನು ಅವರಿಗೆ ಮೀಸಲಿರಿಸಲಾಗಿದೆ.
ಮಹಿಳಾ ದಿನಾಚರಣೆಯನ್ನು ಕಳೆದ ಒಂದು ಶತಕದಿಂದಲೂ ಆಚರಿಸಲಾಗುತ್ತಿದೆ. 1911 ರಲ್ಲಿ ಡೆನ್ಮಾರ್ಕ್, ಆಸ್ಟ್ರೀಯ, ಜಮರ್ನಿ, ಸ್ವಜರ್ಲ್ಯಾಂಡ್ ದೇಶಗಳಲ್ಲಿ ದಶಲಕ್ಷಗಟ್ಟಲೇ ಜನರು ಒಂದು ಕಡೆ ಸೇರುವ ಮೂಲಕ ಮಹಿಳಾ ದಿನಾಚರಣೆಯನ್ನು ಆಚರಿಸಲು ಆರಂಭಿಸಿದರು. ನಂತರ ಅಮೆರಿಕ, ಬ್ರಿಟನ್ಗಳು ಸೇರಿದಂತೆ ಹಲವು ದೇಶಗಳಲ್ಲಿನ ಸಮಾಜವಾದಿ ಪಕ್ಷಗಳು ಹೆಚ್ಚು ಪ್ರಚಾರ ಮಾಡುವ ಮೂಲಕ ಇಂದು ಬಹು ಸಂಖ್ಯಾತ ರಾಷ್ಟ್ರಗಳಲ್ಲಿ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.
ಅಂತರಾಷ್ಟ್ರೀಯ ಮಹಿಳೆಯರ ದಿನ’ವನ್ನು ಪ್ರಥಮ ಬಾರಿಗೆ ಕೂಲಿ ಚಳುವಳಿಯ ಮೂಲಕ (Labour Movement) ಉತ್ತರ ಅಮೆರಿಕ ಮತ್ತು ಯೂರೋಪ್ ರಾಷ್ಟ್ರಗಳಲ್ಲಿ ಆರಂಭಿಸಲಾಯಿತು. ಮಹಿಳಾ ದಿನೋತ್ಸವದ ಮುಖೇನ ಲಿಂಗ ಸಮಾನತೆ ರೂಪಿಸುವಲ್ಲಿ ಪ್ರತಿಯೊಬ್ಬರ ಪಾತ್ರವಿದೆ ಎಂಬ ಅಂಶವನ್ನು ಬಲವಾಗಿ ಸಾರಲು ಈ ದಿನ ಒಂದು ದೊಡ್ಡ ವೇದಿಕೆ ಆಗಿರುತ್ತದೆ. ಅಲ್ಲದೇ ದೇಶಕ್ಕೆ, ಪ್ರಪಂಚಕ್ಕೆ ಮಹಿಳಾ ಸಾಧಕರ ಕೊಡುಗೆಗಳನ್ನು ಸ್ಮರಿಸಿ, ಮೇಲುಕು ಹಾಕುವ ದಿನವಿದು. 1975 ರ ಮಾರ್ಚ್ 8 ರ ‘ಅಂತರರಾಷ್ಟ್ರೀಯ ಮಹಿಳಾ ದಿನ’ದಿಂದ ಸಂಯುಕ್ತ ರಾಷ್ಟ್ರಗಳು ಸಹ ಮಹಿಳಾ ದಿನವನ್ನ ಆಚರಿಸಲು ಮುಂದಾದವು.
ಮಹಿಳೆಯರ ಸಾಧನೆಗಳನ್ನು ಗೌರವಿಸಲು ಮತ್ತು ಲಿಂಗ ಸಮಾನತೆಯನ್ನು ಪ್ರತಿಪಾದಿಸಲು ಮಾರ್ಚ್ 8 ರಂದು ಜಾಗತಿಕವಾಗಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು (IWD) ಆಚರಿಸಲಾಗುತ್ತದೆ. 2025 ರಲ್ಲಿ, “ಎಲ್ಲಾ ಮಹಿಳೆಯರು ಮತ್ತು ಹುಡುಗಿಯರಿಗೆ: ಹಕ್ಕುಗಳು. ಸಮಾನತೆ. ಸಬಲೀಕರಣ” ಎಂಬ ಥೀಮ್ ಲಿಂಗ ಸಮಾನತೆಯತ್ತ ಪ್ರಗತಿಯನ್ನು ತ್ವರಿತಗೊಳಿಸುವ ತುರ್ತುಸ್ಥಿತಿಯನ್ನು ಒತ್ತಿಹೇಳುತ್ತದೆ.
ಮಹಿಳೆ ನಾಲ್ಕು ಗೋಡೆಗೆ ಮಾತ್ರ ಸೀಮಿತವಾಗಿರದೆ ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಇನ್ನಿತರ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಗೌರವಿಸಲು ಹಾಗೂ ಇತರರಿಗೆ ಮಾದರಿಯಾಗಲು ಈ ಮಹಿಳಾ ದಿನಾಚರಣೆ ಸಹಕಾರಿಯಾಗಿದೆ.
ಎಲ್ಲರ ಮನೆಯಲ್ಲಿ ಏನನ್ನೂ ಆಪೇಕ್ಷೆ ಪಡದೆ ಕೆಲಸ ಮಾಡುವ ಅಮ್ಮಂದಿರಿಗೆ ಈ ದಿನ ವಿಶೇಷವಾಗಿ ಅಂಕಿತವಾಗಬೇಕು. ಯಾಕೆಂದರೆ ಎಲ್ಲರಿಗೂ ವಾರಕ್ಕೆ ಒಂದು ದಿನವಾದರೂ ರಜೆ ಇರುತ್ತದೆ. ಆದರೆ ನಮ್ಮ ಸಲುವಾಗಿ ದುಡಿಯುವ ನಮ್ಮ ತಾಯಿಗೆ ಯಾವುದೇ ರಜೆ ಇರುವುದಿಲ್ಲ. ಇಂತಹ ನಿಸ್ವಾರ್ಥ ಮಹಿಳೆಗೆ ದೊಡ್ಡ ಸಲಾಮ್.
ಬೇರೆಯವರ ಮೇಲೆ ಅವಲಂಭಿತವಾಗಿರದೇ ತನ್ನ ಆತ್ಮಗೌರವವನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬ ಮಹಿಳೆ ಇಂದು ಸಾಹಸವನ್ನು ಪಡುತ್ತಿದ್ದಾಳೆ. ಹೀಗಾಗಿ ಇಂತಹ ಮಹಿಳೆಯರಿಗೆ ಬೆಂಬಲವಾಗಿ ನಿಲ್ಲುವ ಸಮಾಜ ನಮ್ಮದಾಗಬೇಕು. ಹೆಣ್ಣಾಗಿ ಹುಟ್ಟಿರುವುದೇ ಒಂದು ಮಹಾಸೌಭಾಗ್ಯ ಮತ್ತು ಮಹಾಶಕ್ತಿ. ಸಂತಸದಿಂದ ಸಂಭ್ರಮಿಸೋಣ. ಮಹಿಳಾ ದಿನಾಚರಣೆಯ ಶುಭಾಶಯಗಳು.

