ಬ್ರಹ್ಮಾವರ: ಉಡುಪಿಯ ಬ್ರಹ್ಮಾವರ ತಾಲ್ಲೂಕಿನ ಮುದ್ದೂರಿನಲ್ಲಿ ಹೆಗ್ಗಳಿಕೆಗೆ ಪಾತ್ರವಾದ ವಿ.ಎಸ್.ಎಸ್ ಆಂಗ್ಲ ಮಾಧ್ಯಮ ಶಾಲೆ ಅನೇಕ ವರ್ಷಗಳಿಂದ ಕಾರ್ಯಾಚರಿಸುತ್ತಾ ಬರುತ್ತಿದ್ದಾರೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಮುನ್ನುಡಿ ಬರೆಯುತ್ತಿರುವ ಈ ಜ್ಞಾನ ದೇಗುಲದಲ್ಲಿ ಇದೀಗ ಖಾಲಿ ಇರುವ ಹುದ್ದೆಗೆ ಭಡ್ತಿ ಮಾಡಲಾಗುತ್ತಿದ್ದು ಶಿಕ್ಷಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಗಣಿತ ಮತ್ತು ವಿಜ್ಞಾನ ವಿಷಯದ ಬೋಧನೆಗೆ ಬಿಎಸ್ಸಿ, ಎಂಎಸ್ಸಿ ಮತ್ತು ಬಿಎಡ್ ಪದವಿ ಮುಗಿಸಿದ ಶಿಕ್ಷಕರು ಬೇಕಾಗಿದ್ದಾರೆ. ಅದೇ ರೀತಿ ಸಮಾಜ ವಿಜ್ಞಾನ, ಹಿಂದಿ, ಇಂಗ್ಲೀಷ್, ಕನ್ನಡ ವಿಷಯಕ್ಕೆ ಸಂಬಂಧಿಸಿ ಪಾಠ ಮಾಡಲು ಬಿ.ಎ, ಎಂ.ಎ, ಬಿ.ಎಡ್ ಪದವಿ ಪೂರೈಸಿದ ಅಭ್ಯರ್ಥಿಗಳು ಬೇಕಾಗಿದ್ದಾರೆ. ಇನ್ನು ಮಾಂಟೆಸ್ಸರಿ ಶಿಕ್ಷಕ ಹುದ್ದೆಗೆ ಎನ್.ಟಿಟಿ/ಪಿಪಿಟಿಟಿ, ಸ್ಟೂಡೆಂಟ್ ಕೌನ್ಸಿಲರ್ ಹುದ್ದೆಗೆ ಮನಃಶಾಸ್ತ್ರ ಮತ್ತು ಕೌನ್ಸಿಲಿಂಗ್ ನಲ್ಲಿ ಎಂ.ಎ ಅಥವಾ ಎ.ಎಸ್ಸಿ ಪದವಿ, ದೈಹಿಕ ಶಿಕ್ಷಕರು ಹುದ್ದೆಗೆ ಬಿ.ಎ ಮತ್ತು ಬಿಪಿಎಡ್, ಎಂಪಿಎಡ್ ವಿದ್ಯಾರ್ಹತೆ ಪೂರ್ಣಗೊಳಿಸಿರಬೇಕು.
ಹಾಸ್ಟೆಲ್ ನಲ್ಲಿ ಕಾರ್ಯನಿರ್ವಹಿಸಲು ಒಬ್ಬ ಪುರುಷ ಅಭ್ಯರ್ಥಿ ಬೇಕಾಗಿದ್ದು ಕಡ್ಡಾಯವಾಗಿ ಅವರು ಪದವಿ ಮುಗಿಸಿರಬೇಕು. ಸ್ಪೆಷಲ್ ಎಜ್ಯುಕೇಟರ್ ಹುದ್ದೆಗೆ ಕೂಡಾ ಅರ್ಜಿ ಆಹ್ವಾನಿಸಲಾಗುತ್ತಿದೆ. ಶಿಕ್ಷಣ ಗುಣಮಟ್ಟ ಮತ್ತು ಅನುಭವಕ್ಕೆ ತಕ್ಕಂತೆ ವೇತನ ನೀಡಲಾಗುತ್ತದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ಮತ್ತು ಪಾಸ್ಪೋರ್ಟ್ ಸೈಜ್ ಫೋಟೋವನ್ನು ಮಾರ್ಚ್ 31ರೊಳಗೆ vsscbse2025@gmail.com ಈ ಇಮೇಲ್ ಗೆ ಅಥವಾ 9482481648 ಅಥವಾ 7795116935 ಈ ನಂಬರಿಗೆ ಕಳುಹಿಸಬಹುದು ಎಂದು ಶಿಕ್ಷಣ ಸಂಸ್ಥೆಯ ಆಡಳಿತ ಸಮಿತಿ ತಿಳಿಸಿದೆ. ವಿದ್ಯಾಸಂಸ್ಥೆಯಲ್ಲಿ ನರ್ಸರಿಯಿಂದ ಹಿಡಿದು ಹತ್ತನೇ ತರಗತಿಯವರೆಗೆ ಅಡ್ಮಿಷನ್ ಆರಂಭವಾಗಿದ್ದು ದಾಖಲಾತಿ ಮಾಡಿಕೊಳ್ಳಬಹುದಾಗಿದೆ.


