ಮೇಷ: ದೀರ್ಘಕಾಲದ ಅನಾರೋಗ್ಯದಿಂದ ಬಳಲಬಹುದು. ನಡೆಯಲ್ಲಿ ಉದಾರ ಭಾವ ಹೊಂದಿರುವಿರಿ. ಕುಟುಂಬದ ಜೊತೆ ಸುಂದರ ಕ್ಷಣ ಕಳೆಯುತ್ತೀರಿ.
ವೃಷಭ: ಧ್ಯಾನ ಮತ್ತು ಯೋಗ ಲಾಭ ತರುತ್ತದೆ. ಉಳಿತಾಯ ಮಾಡುವುದರಿಂದ ಪ್ರಯೋಜನವಿದೆ. ಸ್ನೇಹಿತರ ಜೊತೆ ಕಾಲ ಕಳೆಯಲು ಸುಂದರ ದಿನ.
ಮಿಥುನ: ನೀವು ಮಾಡುವ ಹೂಡಿಕೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಹೊಸ ಹಣಗಳಿಕೆಯ ಉಪಾಯ ತಲೆಗೆ ಬರಬಹುದು. ನೆಮ್ಮದಿಯ ದಿನ ನಿಮ್ಮದಾಗಲಿದೆ.
ಕರ್ಕಾಟಕ: ಅನಗತ್ಯ ಯೋಚನೆಗಳು ಮನಸ್ಸು ಕೆಡುಸಬಹುದು. ಹಣ ವ್ಯರ್ಥ ಖರ್ಚು ಮಾಡಬೇಡಿ.
ಸಿಂಹ: ನಿಮಗೆ ವಿಶ್ರಾಂತಿ ದಿನ. ನಿರ್ಧಾರ ತೆಗೆದುಕೊಳ್ಳುವ ಮೊದಲು ಯೋಚಿಸಿ. ಸಾಕಷ್ಟು ಉಚಿತ ಸಮಯ ಸಿಗುತ್ತದೆ.
ಕನ್ಯಾ: ಕೋಪವನ್ನು ನಿಯಂತ್ರಿಸಲು ಪ್ರಯತ್ನಿಸಿ. ವಿಶ್ರಾಂತಿ ಕ್ಷಣಗಳನ್ನು ಕಳೆಯುತ್ತೀರಿ. ನಿರೀಕ್ಷೆ ಮೀರಿ ಆದಾಯ ಗಳಿಸುವ ದಿನ
ತುಲಾ: ಪ್ರಯಾಣದಲ್ಲಿ ಅಮೂಲ್ಯ ವಸ್ತುಗಳ ಮೇಲೆ ಎಚ್ಚರವಿರಲಿ. ಉದ್ಯೋಗಕ್ಕಾಗಿ ಕೈಗೊಂಡ ಪ್ರಯಾಣ ಫಲಪ್ರದ. ಯಾವುದಕ್ಕೂ ಪೋಷಕರ ಅನುಮತಿ ಪಡೆದುಕೊಳ್ಳಿ.
ವೃಶ್ಚಿಕ: ಹಣಗಳಿಕೆಯ ಅವಕಾಶಗಳು ಲಾಭದಾಯಕವಾಗಿರುತ್ತದೆ. ಸಮಾಜ ಸೇವೆ ನಿಮ್ಮನ್ನು ಸೆಳೆಯುತ್ತದೆ. ನಿಮ್ಮ ಸಂಗಾತಿ ನಿಮ್ಮ ಬಗ್ಗೆ ಯೋಚಿಸುತ್ತಾರೆ.
ಧನಸ್ಸು: ಚೈತನ್ಯಯುಕ್ತವಾದ ದಿನ. ಇತರರಿಗೆ ಸಮಯ ನೀಡಲು ಉತ್ತಮ ದಿನ. ಹಣದಿಂದ ಲಾಭ ಪಡೆಯಬಹುದು.
ಮಕರ: ಕ್ರೀಡೆಯಲ್ಲಿ ಆಟವಾಡಿ ಚೈತನ್ಯ ಗಳಿಸುತ್ತೀರಿ. ಕೆಲಸದಲ್ಲಿ ಬದ್ಧತೆಯಿದ್ದರೆ ಲಾಭ ಗಳಿಸುತ್ತೀರಿ. ನಿಮ್ಮ ಸಂಗಾತಿಯ ಮೇಲೆ ಮುನಿಸಿಕೊಳ್ಳಬಹುದು.
ಕುಂಭ: ಭಯ ಹೋಗಲಾಡಿಸಲು ಒಳ್ಳೆಯ ಸಮಯ. ಕೋಪ ನಿಯಂತ್ರಿಸಿಕೊಂಡರೆ ಒಳ್ಳೆಯದು. ಕುಟುಂಬದವರ ಮನ ನೋಯಿಸಬೇಡಿ.
ಮೀನ: ಸಂಗಾತಿಯಿಂದ ಬೆಂಬಲ ಸಿಗುತ್ತದೆ. ಫ್ರೀ ಟೈಮಲ್ಲಿ ಯೋಗ ಮಾಡಿ. ಮಾನಸಿಕ ಶಾಂತಿಯನ್ನು ಅನುಭವಿಸುತ್ತೀರಿ.

