ಶಿರ್ವ : ಬಸ್ಸಿಗಾಗಿ ಕಾಯುತ್ತಿದ್ದ ದಂಪತಿಗೆ ಕಾರೊಂದು ಡಿಕ್ಕಿಯಾಗಿ ದಂಪತಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಕಾಪು – ಶಿರ್ವ ಮುಖ್ಯ ರಸ್ತೆಯ ಕಳತ್ತೂರು ಗ್ರಾಮದ ಶೆಟ್ಟಿಗಾರ್ ಕಾಂಪೌಂಡ್ ಬಳಿ ನಡೆದಿದೆ.
ಗಾಯಗೊಂಡವರನ್ನು ಕುತ್ಯಾರು ನಿವಾಸಿ ಭವಾನಿ (29) ಹಾಗೂ ಅವರ ಪತಿ ಜಯ ಶೆಟ್ಟಿಗಾರ್ (35), ಎಂದು ಗುರುತಿಸಲಾಗಿದೆ.
ಪಡುಬಿದ್ರೆಯ ಜನೌಷಧಿ ಕೇಂದ್ರಕ್ಕೆ ಕೆಲಸಕ್ಕೆ ತೆರಳಲು ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಶಿರ್ವ ಕಡೆಯಿಂದ ವೇಗವಾಗಿ ಬಂದ ಕಾರು ರಸ್ತೆ ಬದಿ ನಿಂತಿದ್ದ ದಂಪತಿಗಳಿಗೆ ಡಿಕ್ಕಿಯಾಗಿದೆ.
ಘಟನೆಯಿಂದ ದಂಪತಿ ರಸ್ತೆ ಬದಿಗೆ ಬಿದ್ದು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

