ಉಡುಪಿ ಜಿಲ್ಲೆಯ ವಿ.ಎಸ್.ಎಸ್ ಆಂಗ್ಲಮಾಧ್ಯಮ ಶಾಲೆ ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮತ್ತೊಮ್ಮೆ ತನ್ನ ಶೈಕ್ಷಣಿಕ ಶ್ರೇಷ್ಠತೆಯನ್ನು ಸಾಬೀತುಪಡಿಸಿದೆ. ಹಲವು ವರ್ಷಗಳಿಂದ ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಸಂಸ್ಥೆ, ಈ ಬಾರಿ ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದ ಕಲ್ಯಾಣಿ ಅವರ ಸಾಧನೆಯೊಂದಿಗೆ ಹೊಸ ಇತಿಹಾಸ ನಿರ್ಮಿಸಿದೆ.
ಶಾಲೆ ಶೇಕಡಾ 100 ಫಲಿತಾಂಶ ದಾಖಲಿಸಿದ್ದು, ಪರೀಕ್ಷೆಗೆ ಹಾಜರಾದ 98% ವಿದ್ಯಾರ್ಥಿಗಳು 80% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರುವುದು ವಿಶೇಷ.
ಈ ಬಾರಿಯ ಫಲಿತಾಂಶವು ನಮ್ಮ ಸಂಸ್ಥೆಯ ರಾಜ್ಯ ಪಠ್ಯಕ್ರಮದ (STATE BOARD) ಕೊನೆಯ ಫಲಿತಾಂಶವಾಗಿದ್ದು , ಮುಂದಿನ ಶೈಕ್ಷಣಿಕ ವರ್ಷದ CBSE ಫಲಿತಾಂಶಕ್ಕೆ ಮಹತ್ವದ ಮುನ್ನುಡಿಯಾಗಿರುತ್ತದೆ.
ಈ ಅದ್ಭುತ ಸಾಧನೆಗೆ ಕಾರಣವಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿ, ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು ಮತ್ತು ಸಹಪಾಠಿಗಳು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

