ಉಡುಪಿ: ಜಿಲ್ಲೆಯಾದ್ಯಂತ ಕೆಲವು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಗಾಳಿ ಮಳೆಗೆ ವಿವಿಧಡೆ ಹಾನಿ ಉಂಟಾಗಿದೆ. ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿರುವ ಘಟನೆ ಕುಂದಾಪುರ, ಬೈಂದೂರಿನ ಕೆಲವು ಕಡೆಗಳಲ್ಲಿ ನಡೆದಿದೆ.
ರೆಡ್ ಅಲರ್ಟ್ ಮುಂದುವರೆದ ಕಾರಣ ಇನ್ನೂ ಕೆಲವು ದಿನ ಮಳೆ ಸುರಿಯುವ ಸಾಧ್ಯತೆಯಿದೆ. ಶಿರೂರಿನ ಗಿರಿಜಾ ಎಂಬವರ ಮನೆಗೆ ಸೇರಿದಂತೆ ಕುಂದಾಪುರ, ಬೈಂದೂರಿನ ಅನೇಕ ಕಡೆಗಳಲ್ಲಿ ಮರ ಬಿದ್ದು ಹಾನಿಯಾಗಿದೆ.
ಉಡುಪಿ ಜಿಲ್ಲೆಯಲ್ಲಿ ಒಟ್ಟು ನೂರ ಎಪ್ಪತ್ತ ಮೂರು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಮೆಸ್ಕಾಂಗೆ ನಲ್ವತ್ತೆರಡು ಲಕ್ಷ ರೂ. ಗೂ ಅಧಿಕ ಹಾನಿಯಾಗಿದೆ. ಕೆಲವೆಡೆ ಮನೆಯ ಹಂಚು ಕೂಡಾ ಗಾಳಿಗೆ ಹಾರಿ ಹೋಗಿದೆ.



