ಮಂಗಳೂರು: ಪುಣೆಯ ಕ್ರೈಸ್ಟ್ ಯುನಿವರ್ಸಿಟಿಯ ವಿದ್ಯಾರ್ಥಿನಿ, ಹೆಮ್ಮೆಯ ಕರಾವಳಿ ಕುವರಿ ಮಿಚೆಲ್ ಮಾರಿಯಾ ಡಿಸೋಜಾ ಅವರು ಬಹ್ರೇನ್ ನಲ್ಲಿ ಇಂಡಿಯನ್ ಕ್ಲಬ್ ಮೇ ಕ್ವೀನ್- ೨೦೨೫ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಮಂಗಳೂರು ಮೂಲದವರಾದ ಇವರು ತಮ್ಮ ಶಾಲಾ ಶಿಕ್ಷಣವನ್ನು ಬಹ್ರೇನ್ ನಲ್ಲೇ ಮುಗಿಸಿದರು. ಪ್ರತಿಭಾನ್ವಿತೆಯಾಗಿರುವ ಈಕೆ ನಾಲ್ಕು ವರ್ಷ ಇರುವಾಗಿನಿಂದಲೇ ಅನೇಕ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು.
ಮೇ ಕ್ವೀನ್ ಸ್ಪರ್ಧೆಯ ತೀರ್ಪುಗಾರರು ಅವರ ಸೌಂದರ್ಯ, ಬುದ್ಧಿಶಕ್ತಿ, ವೇದಿಕೆಯ ಉಪಸ್ಥಿತಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮಿಚೆಲ್ ಅವರ ಈ ಸಾಧನೆಯ ಬಗ್ಗೆ ಹೆತ್ತವರಾದ ಸುನಿಲ್ ಮತ್ತು ವೀಣಾ ಡಿಸೋಜ, ಸೋದರ ಸ್ಟೀವ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.


