ಮಣಿಪಾಲ: ಇಲ್ಲಿನ ಆಸ್ಪತ್ರೆಗೆ ರೋಗಿಯೊಬ್ಬರನ್ನು ಕರೆ ತರುತ್ತಿರುವಾಗಲೇ ಆ್ಯಂಬುಲೆನ್ಸ್ ರಸ್ತೆಯ ಡಿವೈಡರ್ ಗೆ ಢಿಕ್ಕಿ ಹೊಡೆದು ಅದರಲ್ಲಿದ್ದ ರೋಗಿ ಸಾವನ್ನಪ್ಪಿದ ಘಟನೆ ಎಂಜಿಎಂ ಕಾಲೇಜಿನ ಎದುರು ನಡೆದಿದೆ.
ಕೋಟೇಶ್ವರದಿಂದ ಮಣಿಪಾಲ ಆಸ್ಪತ್ರೆಗೆ ರೋಗಿಯನ್ನು ಕರೆತರಲಾಗುತ್ತಿತ್ತು. ಈ ಸಂದರ್ಭ ಕಾಲೇಜಿನ ಬಳಿ ಕಂಟ್ರೋಲ್ ತಪ್ಪಿ ಡಿವೈಡರ್ ಗೆ ಗುದ್ದಿ ನಂತರ ಆ್ಯಂಬುಲೆನ್ಸ್ ಬ್ಯಾರಿಕೇಡ್ ಗಳಿಗೂ ಢಿಕ್ಕಿ ಹೊಡೆದಿದೆ.
ಅವಘಡ ನಡೆದ ತಕ್ಷಣ ರೋಗಿಯನ್ನು ಮತ್ತೊಂದು ಆ್ಯಂಬುಲೆನ್ಸ್ ಗೆ ರವಾನಿಸಿ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

