ಬೈಂದೂರು : ಇಲ್ಲಿನ ಕೊಲ್ಲೂರು ಗ್ರಾಮ ನಿವಾಸಿ ನಟೇಶ್ (36) ಎಂಬಾತ ಸೌಪರ್ಣಿಕ ನದಿಯಲ್ಲಿ ಜಾರಿ ಬಿದ್ದು, ಮಾವಿನಕಾರು ಬಳಿ ಇಂದು ಮುಂಜಾನೆ 9ರ ಸುಮಾರಿಗೆ ಶವ ದೊರಕಿದೆ.
ನಟೇಶ್ ಸೌಪರ್ಣಿಕ ನದಿ ಸಮೀಪ ಕಾರು ನಿಲ್ಲಿಸಿ ನದಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ನಂತರ ಆತನ ಕಾರನ್ನು ಪರಿಶೀಲನೆ ಮಾಡಿದಾಗ ಒಂದು ನೋಟ್ ಸಿಕ್ಕಿದ್ದು, ಅದರಲ್ಲಿ ಮೊಬೈಲ್ ಪಾಸ್ ವರ್ಡ್ ಬರೆದಿದ್ದು, ನನ್ನ ಸಾವಿನ ರಹಸ್ಯ ಮೊಬೈಲ್ ಗ್ಯಾಲರಿಯಲ್ಲಿದೆ ಎಂದು ಬರೆದಿದ್ದಾನೆ.
ಮೊಬೈಲ್ ಓಪನ್ ಮಾಡಿದ ನಂತರ ಅದರಲ್ಲಿ ವಿಡಿಯೋ ತುಣುಕುಗಳಿದ್ದವು. ಆ ವಿಡಿಯೋ ತುಣುಕಿನಲ್ಲಿ ಸಂತೋಷ ಹಾಗೂ ನಾಗೇಶ್ ತನ್ನ ಬಗ್ಗೆ ಅಪಪ್ರಚಾರ ಮಾಡಿದ್ದಾರೆ, ಹೀಗಾಗಿ ನಾನು ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಸಂತೋಷ ಹಾಗೂ ನಾಗೇಶ್ ಕಾರಣ ಎನ್ನುವುದಾಗಿ ವಿಡಿಯೋ ತುಣುಕಿನಲ್ಲಿ ಹೇಳಿಕೊಂಡಿದ್ದಾನೆ. ಈ ಕಾರಣಕ್ಕಾಗಿ ಇದೀಗ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.


