ಹಿಂದೂ ಸಮಾಜದ ಪವಿತ್ರ ಹಬ್ಬ ರಕ್ಷಾಬಂಧನ. ಸಹೋದರತ್ವದ ಭಾವನೆಯ ನಂಟನ್ನ ಬೆಸೆದು ಆ ನಂಟನ್ನು ಶಾಶ್ವತದ ಗೊಳಿಸುವ ಪ್ರತೀಕವಾಗಿ ಈ ರಕ್ಷಾ ಬಂಧನವನ್ನು ಆಚರಿಸಲಾಗುತ್ತೆ. ಜೀವನ ಪಯಣ ನಮ್ಮ ಸೋಲು ಗೆಲುವಿನ ಸಮಯದಲ್ಲಿ ನಮ್ಮ ಜೊತೆ ನಿಂತು ಸಲಹೆ ನೀಡಿ ಮಾರ್ಗದರ್ಶನ ತೋರುವ ಅಣ್ಣ ತಮ್ಮಂದಿರು ಅಕ್ಕ ತಂಗಿಯರಿಗೆ ಈ ದಿನ ಅರ್ಪಣೆ. ಈ ಹಬ್ಬವು ವರ್ಷಂ ಪ್ರತಿ ಶ್ರಾವಣ ಮಾಸದ ಹುಣ್ಣಿಮೆ ಸಂದರ್ಭದಲ್ಲಿ ಆಚರಿಸಲಾಗುತ್ತದೆ.ತನ್ನ ಸಹೋದರನಿಗೆ ರಕ್ಷೆಯನ್ನ ಕಟ್ಟಿ ಆತನ ಸುಖ ಶಾಂತಿ,ನೆಮ್ಮದಿ, ಆರೋಗ್ಯ,ಐಶ್ವರ್ಯ,ವೃದ್ಧಿಯಾಗಲಿ ಎಂದು ಸಹೋದರಿ ಇವೆಲ್ಲದರ ಸಂಕೇತವಾಗಿ ರಾಖಿಯನ್ನು ಕಟ್ಟುತ್ತಾಳೆ. ಪುರಾಣಗಳಲ್ಲೂ ಈ ರಕ್ಷಾಬಂಧನ ದಿನಕ್ಕೆ ವಿಶೇಷವಾದ ಸ್ಥಾನಮಾನವಿದೆ.ಪುರಾಣ ಕಥೆಗಳಲ್ಲಿ ಒಂದಾದ ಮಹಾಭಾರತ ಕಥೆಯಲ್ಲಿ ಶಿಶುಪಾಲನ ವದೆಯ ಕಥೆ ಕೂಡ ಒಂದಾಗಿದೆ. ಇದರಲ್ಲಿ ಶ್ರೀಕೃಷ್ಣನೂ ಶಿಶುಪಾಲನಿಗೆ ನೂರು ತಪ್ಪುಗಳನ್ನು ಮಾಡಲು ಬಿಟ್ಟು, ನೂರ ಒಂದನೇ ತಪ್ಪಿಗೆ ಶಿಕ್ಷೆಯಾಗಿ ಶಿಶು ಪಾಲನ ಸಂಹಾರದ ಸಮಯದಲ್ಲಿ ಕೃಷ್ಣ ತನ್ನ ಸುದರ್ಶನ ಚಕ್ರವನ್ನು ಪ್ರಯೋಗ ಮಾಡಿದ ರಭಸಕ್ಕೆ ಕೃಷ್ಣನ ಕೈಯಲ್ಲಿ ಗಾಯವಾಗಿ ರಕ್ತ ಸುರಿಯುತ್ತದೆ.
ಇದೆ ಸಂದರ್ಭದಲ್ಲಿ ಅಲ್ಲೇ ಇದ್ದ ದ್ರೌಪದಿ ತನ್ನ ಸೀರೆಯ ತುಂಡನ್ನು ಹರಿದು ಕೃಷ್ಣನ ಕೈಯಲ್ಲಿ ರಕ್ತ ಸುರಿಯುತ್ತಿದ್ದ ಜಾಗಕ್ಕೆ ಕಟ್ಟುತ್ತಾಳೆ.ಈ ಸಂದರ್ಭದಲ್ಲಿ ಕೃಷ್ಣ ದ್ರೌಪದಿಗೆ ತನ್ನ ಕಷ್ಟದ ಸಮಯದಲ್ಲಿ ನನ್ನನ್ನು ನೆನೆದರೆ ಸಹಾಯ ಮಾಡುವುದಾಗಿ ಹೇಳುತ್ತಾನೆ. ಕೆಲ ದಿನಗಳ ನಂತರ ದುಷ್ಯಾಸನ ದ್ರೌಪದಿಯ ಸೀರೆ ಎಳೆದಾಗ ಕೃಷ್ಣ ಸಾವಿರಾರು ಸೀರೆಗಳನ್ನು ಎಳೆಗಳ ರೂಪದಲ್ಲಿ ನೀಡಿ ದ್ರೌಪದಿ ಮಾನವನ್ನು ರಕ್ಷಣೆ ಮಾಡುತ್ತಾನೆ.ಈ ಕಾರಣಕ್ಕೆ ದ್ರೌಪದಿ ಮಾನ ರಕ್ಷಣೆ ಮಾಡಿದ ದಿನವನ್ನ ರಕ್ಷಾ ಬಂಧನವಾಗಿ ಆಚರಿಸಲಾಗುತ್ತದೆ.
ಇಂದ್ರ ಪುರಾಣದಲ್ಲೂ ಸಹಾ ರಕ್ಷಾ ಬಂಧನದ ಉಲ್ಲೇಖವಿದ್ದು, ಇಲ್ಲಿ ಇಂದ್ರನು ಒಂದು ಯುದ್ಧದಲ್ಲಿ ಸೋಲುವ ಭೀತಿಯಲ್ಲಿದ್ದನಂತೆ, ಆ ಸಂದರ್ಭದಲ್ಲಿ ಇಂದ್ರನ ಹೆಂಡತಿ ಒಂದು ರಕ್ಷೆಯನ್ನು ಕಟ್ಟುತ್ತಾಳೆ. ಈ ರಕ್ಷೆ ಕಟ್ಟಿದ ನಂತರದಲ್ಲಿ ಆ ಯುದ್ಧದಲ್ಲಿ ಇಂದ್ರನು ಗೆದ್ದನಂತೆ, ಕಾಲ ಕಳೆದಂತೆ ಸಹೋದರಿಯರು ಈ ರಕ್ಷೆಯನ್ನು ಸಹೋದರನಿಗೆ ಕಟ್ಟುವ ವಾಡಿಕೆ ಆರಂಭವಾಗಿ ರಕ್ಷಾ ಬಂಧನ ಹಬ್ಬ ಆಚರಿಸಲಾಯಿತು.
ಒಂದೊಮ್ಮೆ ಪಂಜಾಬ್ ರಾಜ ಪುರುಷೋತ್ತಮ ಮತ್ತು ಅಲೆಗ್ಸಾಂಡರ್ ನಡುವೆ ದೊಡ್ಡ ಯುದ್ಧ ನಡೆಯುತ್ತೆ, ಈ ಯುದ್ಧದಲ್ಲಿ ಅಲೆಗ್ಸಾಂಡರ್ ಸೋಲುವ ಹಂತದಲ್ಲಿದ್ದ, ಆಗ ಅಲೆಗ್ಸಾಂಡರ್ ಪತ್ನಿ ತನ್ನ ಪತಿಯನ್ನು ಕೊಲ್ಲದಂತೆ ರಕ್ಷಿಸಲು ರಾಜ ಪುರುಷೋತ್ತಮನಿಗೆ ರಾಕಿಯನ್ನು ಕಟ್ಟುತ್ತಾಳೆ ಎಂದು ಇತಿಹಾಸದಲ್ಲಿ ರಕ್ಷಾಬಂಧನದ ಉಲ್ಲೇಖಗಳು ಸಿಗುತ್ತದೆ. ಒಟ್ಟಾರೆ ರಕ್ಷಾಬಂಧನ ಒಂದು ಪವಿತ್ರ ಸಂಬಂಧವನ್ನ ಬೆಸೆಯುವ ಹಬ್ಬವಾಗಿದ್ದು, ಈ ಹಬ್ಬವು ಮುಂದಿನ ಪೀಳಿಗೆಗೂ ಸಂಬಂಧಗಳ ಮೌಲ್ಯವನ್ನ ತಿಳಿಸುವ ಹಬ್ಬವಾಗಲಿ ಎಂಬುದು ನಮ್ಮ ಆಶಯ.


