ಕಾರ್ಕಳ: ಪಳ್ಳಿ-ನಿಂಜೂರು ವಲಯ(ರಿ) ಬಂಟರ ಸಂಘದ ವತಿಯಿಂದ ಸಸಿ ನೆಡುವುದರ ಮೂಲಕ ವನ ಮಹೋತ್ಸವ ಆಚರಣೆಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸಂಘದ ನೂತನ ಅಧ್ಯಕ್ಷರು ಹಾಗೂ ನಿಂಜೂರು ಕನ್ಸ್ಟ್ರಕ್ಷನ್ ಮಾಲೀಕ ಚಂದ್ರಶೇಖರ ಶೆಟ್ಟಿ ಅವರು ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಕಾರ್ಯಕ್ರಮಕ್ಕೆ ಆಗಮಿಸಿರುವ ಎಲ್ಲಾ ಬಂಟ ಸಮಾಜ ಬಾಂಧವರು ಹಾಗೂ ಸಮಿತಿ ಸದಸ್ಯರು ಅವರೊಟ್ಟಿಗೆ ಕೈ ಜೋಡಿಸಿದರು.
ಆಗಮಿಸಿರುವ ಎಲ್ಲರನ್ನ ಸಂಘದ ಸ್ಥಾಪಕ ಅಧ್ಯಕ್ಷ ಮನೋಹರ ಶೆಟ್ಟಿ ಪಳ್ಳಿ ಸ್ವಾಗತಿಸಿದರು. ದಿನಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಗೌರೀಶ್ ಶೆಟ್ಟಿ ನಿಂಜೂರು ವಂದಿಸಿದರು.


