ಮಂಗಳೂರು :ಅ 10 ಈಜು ಕೊಳ ಒಂದರಲ್ಲಿ ಮುಳುಗಿ ಕೋಚ್ ಓರ್ವರು ಸಾವನ್ನಪ್ಪಿದ ಘಟನೆ ಮಂಗಳೂರು ಸಮೀಪದ ಲೇಡಿಹಿಲ್ ಮಹಾನಗರ ಪಾಲಿಕೆಯ ಈಜುಕೊಳದಲ್ಲಿ ನಡೆದಿದೆ.
ಮೃತರನ್ನ ಕೆ. ಚಂದ್ರ ಶೇಖರ್ ರೈ ಸೂರಿಕುಮೇರು (52) ಎನ್ನಲಾಗಿದ್ದು, ಬಲ್ಲ ಮೂಲಗಳ ಪ್ರಕಾರ ಈಜುಕೊಳದ ನಿರ್ವಹಣೆ ನಿಮಿತ್ತ ಭಾನುವಾರ ಈಜುಕೊಳಕ್ಕೆ ರಜೆ ನೀಡಲಾಗಿತ್ತು. ಈ ಸಂದರ್ಭದಲ್ಲಿ ಈಜಲು ನೀರಿಗಿಳಿದಾಗ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
2023 ರಲ್ಲಿ ಈಜುಕೊಳದ ನೀರಿನೊಳಗೆ 1 ನಿಮಿಷದಲ್ಲಿ 28 ಬಾರಿ ಸಮ್ಮರ್ ಸಾಲ್ಟ್ ಸ್ಟಂಟ್ ಮಾಡಿ ವರ್ಡ್ ಬುಕ್ ಆಪ್ ರೆಕಾರ್ಡ್ ಸಾಧನೆ ಮಾಡಿದ್ದರು.


