ಮಂಗಳೂರು : 10 ಕೆಜಿ ತೂಕದ ಸುಮಾರು 8 ಸಾವಿರ ಬೆಲೆ ಬಾಳುವ ತಾಮ್ರಮದ ಗಂಟೆ ಕಳ್ಳತನ ಮಾಡಿದ್ದ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ಕಬಕ ನಿವಾಸಿ ಸಂಶುದ್ದೀನ್ @ ಸಂಶು (50) ಎಂದು ಗುರುತಿಸಲಾಗಿದೆ.
ಜುಲೈ 26 ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಸುಮಾರು 10 ಕೆಜಿ ತೂಕದ ಸುಮಾರು 8000/- ರೂ ಬೆಲೆ ಬಾಳುವ ತಾಮ್ರದ ಗಂಟೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ಜುಲೈ 26ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ.
ಪ್ರಕರಣದ ಆರೋಪಿತನಾದ ಪುತ್ತೂರು, ಕಬಕ ನಿವಾಸಿ ಸಂಶುದ್ದೀನ್ @ ಸಂಶು (50) ಎಂಬಾತನನ್ನು ಪುತ್ತೂರು ನಗರ ಠಾಣಾ ಪೊಲೀಸರು ದಸ್ತಗಿರಿ ಮಾಡಿರುತ್ತಾರೆ. ಸದ್ರಿ ಆರೋಪಿಯು ಪುತ್ತೂರು ನಗರ ಠಾಣಾ ಅ.ಕ್ರ 83/2004, ಕಲಂ: 454, 380 ಐಪಿಸಿ ಪ್ರಕರಣದಲ್ಲೂ ಆರೋಪಿಯಾಗಿರುತ್ತಾನೆ.


