*ಮಲ್ಪೆ : ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು*
ಉಡುಪಿ : ಮಲ್ಪೆ ಬಂದರಿನಿಂದ ಮೀನುಗಾರಿಕೆ ತೆರಳಿದ್ದ ಬೋಟ್ ಗಾಳಿಗೆ ಸಿಲುಕಿದ ಪರಿಣಾಮ ಮೀನುಗಾರರೊಬ್ಬರು ಮೃತಪಟ್ಟಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಕೋಲಾದ ನಿವಾಸಿ ಶ್ರೀನಿವಾಸ ರಾಮ ತಾಂಡೇಲ (46) ಮೃತ ದುರ್ದೈವಿ.
ಆ.13ರಂದು ಬೆಳಗ್ಗೆ ಸುಮಾರು 10.30ಕ್ಕೆ ಮಾಣಿ ಕೃಷ್ಣ ಹೆಸರಿನ ಬೋಟಿನಲ್ಲಿ ಒಟ್ಟು 37 ಜನರು ಮೀನು ಗಾರಿಕೆಗೆ ಹೋಗಿದ್ದರು. ಸುಮಾರು 15 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆಗಾಗಿ ಬಲೆ ಬಿಡುತ್ತಿರುವಾಗ ಬೋಟು ಬಿರುಗಾಳಿಗೆ ಸಿಲುಕಿ ಬೋಟು ರೋಲ್ ಆಗಿದೆ. ಆಗ ಶ್ರೀನಿವಾಸ ರಾಮ ತಾಂಡೇಲ ಅವರು ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರದಲ್ಲಿ ಮೀನುಗಾರಿಕೆಗೆ ಬಿಟ್ಟ ಬಲೆಯೆ ಒಳಗೆ ಬಿದ್ದಿದ್ದಾರೆ. ಅನಂತರ ಅವರನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವ ಬಗ್ಗೆ ತಿಳಿಸಿದ್ದಾರೆ.


