ಉಡುಪಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಡಿ.3ರಂದು ವಿಶ್ವ ವಿಕಲಚೇತನರ ದಿನಾಚರಣೆಯನ್ನು ರಾಜ್ಯ ಮಟ್ಟದಲ್ಲಿ ನಡೆಸುವ ಸಂದರ್ಭ ಸರಕಾರದ ವತಿಯಿಂದ ವಿಶೇಷಚೇತನರ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿದ ಸಂಸ್ಥೆಗಳಿಗೆ, ವಿಶೇಷ ಶಿಕ್ಷಕರಿಗೆ ಮತ್ತು ವೈಯಕ್ತಿಕ ಪ್ರಶಸ್ತಿಗಳನ್ನು ರಾಜ್ಯ ಮಟ್ಟದಲ್ಲಿ ನೀಡಿ ಗೌರವಿಸಲು ಉದ್ದೇಶಿಸಿದೆ.
ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅ.15 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿ ಕರ ಸಬಲೀಕರಣ ಅಧಿಕಾರಿಗಳು, ಸಿ ಬ್ಲಾಕ್, ತಳಮಹಡಿ, ಜಿಲ್ಲಾ ಪಂಚಾಯಿತಿ ವಿಭಾಗ, ಜಿಲ್ಲಾಧಿ ಕಾರಿ ಕಚೇರಿ, ರಜತಾದ್ರಿ, ಮಣಿಪಾಲ ವಿಳಾಸವನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.


