ಕಾರ್ಕಳ : ದಿನಾಂಕ ಡಿಸೆಂಬರ್ 1, 2025. ಬೆಳಿಗ್ಗೆ 8:20ಕ್ಕೆ, ಕಾರ್ಕಳ ತಾಲೂಕಿನ ಜಾರ್ಕಳ ಮುಂಡ್ಲಿ ಗ್ರಾಮದ ಗುಣಕರ ಶೆಟ್ಟ (56) ಅವರ ಸ್ಕೂಟಿ ಕಳುವಾಗಿದೆ.
ಗುಣಕರ ಶೆಟ್ಟ ಅವರು ತಮ್ಮ ಮಾಲೀಕತ್ವದ KA20HB5819 ನಂಬರಿನ ಸ್ಕೂಟಿ ಹಾಗೂ Redmi ಕಂಪೆನಿಯ ಸಿಮ್ ಸಹಿತ ಮೊಬೈಲ್ ಅನ್ನು, ಆನೆಕೆರೆ ಬಸದಿ ಬಳಿಯ ರಸ್ತೆಯ ಪಕ್ಕದಲ್ಲಿ ಪಾರ್ಕ್ ಮಾಡಿ, ಕೀ ಯನ್ನು ವಾಹನದಲ್ಲೇ ಬಿಟ್ಟು ಹೋಗಿದ್ದರು.
ಮಧ್ಯಾಹ್ನ 2 ಗಂಟೆಗೆ ವಾಪಸ್ಸು ಬಂದು ನೋಡಿದಾಗ, ಅಲ್ಲಿದ್ದ ಸ್ಕೂಟಿ ಹಾಗೂ ಅದರಲ್ಲಿ ಇಟ್ಟಿದ್ದ ಮೊಬೈಲ್ ಯಾರೋ ಕಳ್ಳರು ಕಳವು ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ.
ಕಳವಾದ ಸ್ಕೂಟಿಯ ಅಂದಾಜು ಮೌಲ್ಯ ₹48,000, ಹಾಗೂ ಮೊಬೈಲ್ನ ಅಂದಾಜು ಮೌಲ್ಯ ₹3,000 ಆಗಿದೆ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 168/2025, ಕಲಂ 303(2) BNS ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ಕಳ್ಳತನ ಪ್ರಕರಣದ ತನಿಖೆ ಮುಂದುವರಿಸಿದ್ದು, ಸಿಸಿಟಿವಿ ಪರಿಶೀಲನೆ ಮತ್ತು ಸುಳಿವು ಸಂಗ್ರಹಕ್ಕೆ ಕ್ರಮ ಕೈಗೊಂಡಿದ್ದಾರೆ.
