ಪುತ್ತೂರು; ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಪುತ್ತೂರಿನ ಪುರಭವನದಲ್ಲಿ 2022 ಹಾಗೂ 2023ನೇ ಸಾಲಿನ ಬ್ಯಾರಿ ಅಕಾಡೆಮಿ ಗೌರವ ಪುರಸ್ಕಾರ ಪ್ರದಾನ ಹಾಗೂ ಬ್ಯಾರಿ ವಿದ್ಯಾರ್ಥಿ ಸಂಗಮ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ,ಕಾರ್ಯಕ್ರಮವನ್ನು ಬೆಳಿಗ್ಗೆ 10 ಗಂಟೆಗೆ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಪಿ.ಅಹ್ಮದ್ ಹಾಜಿ ಉದ್ಘಾಟಿಸಲಿದ್ದಾರೆ. ಬಳಿಕ ಮಹಿಳೆಯರಿಗೆ ಸಾಂಪ್ರದಾಯಿಕ ಆಹಾರ ಮತ್ತು ಮೆಹಂದಿ ವಿನ್ಯಾಸ ಸ್ಪರ್ಧೆ ನಡೆಯಲಿದೆ. ಮಕ್ಕಳಿಗೆ ಬ್ಯಾರಿಹಾಡು ಸ್ಪರ್ಧೆ ಮತ್ತು ಸಾರ್ವಜನಿಕರಿಗೆ ಕ್ವಿಜ್ ಸ್ಪರ್ಧೆ ಆಯೋಜನೆ ಮಾಡಲಾಗಿದೆ.
ಮಧ್ಯಾಹ್ನ 2 ಗಂಟೆಗೆ ವಿದ್ಯಾರ್ಥಿ ಸಂಗಮ ನಡೆಯಲಿದ್ದು, ಯುವ ಜನತೆಯ ಮುಂದಿರುವ ಸವಾಲುಗಳು ಹಾಗೂ ಪರಿಹಾರ ಚರ್ಚಾಗೋಷ್ಟಿ ನಡೆಯಲಿದೆ. ನ್ಯಾ.ಎಂ ಸಿದ್ದೀಕ್, ಪ್ರಾಧ್ಯಾಪಕ ಅಬ್ದುಲ್ ರಝಾಕ್ ಅನಂತಾಡಿ ಮತ್ತು ಪುತ್ತೂರು ಕಮ್ಯೂನಿಟಿ ಸೆಂಟರ್ನ ಹನೀಫ್ ಭಾಗವಹಿಸಲಿದ್ದಾರೆ. ಬ್ಯಾರಿ ಕವಿಗೋಷ್ಟಿಯ ಅಧ್ಯಕ್ಷತೆಯನ್ನು ಮುಹಮ್ಮದ್ ಬಡ್ಡೂರು ವಹಿಸಲಿದ್ದು, ಸಫ್ವಾನ್ ಸವಣೂರು, ಮುಹಮ್ಮದ್ ಶರೀಫ್ ನಿರ್ಮುಂಜೆ, ರಹ್ಮತ್ ಪುತ್ತೂರು, ಅಶ್ರಫ್ ಅಪೋಲೊ, ಸಿಂಸಾರುಲ್ ಹಕ್ ಆರ್ಲಪದವು, ಆಯಿಷಾ ಪೆರ್ನೆ, ಸಲೀಂ ಮಾಣಿ ಹಾಗೂ ಯಂಶ ಬೇಂಗಿಲ ಕವನ ವಾಚನ ಮಾಡಲಿದ್ದಾರೆ.
ಗೌರವ ಪುರಸ್ಕಾರ ಅಬ್ದುಲ್ ಸಮದ್ ಬಾವಾ (ಸಾಹಿತ್ಯ), ಅನ್ಸಾರ್ ಇನೋಳಿ(ಭಾಷೆ), ರಶೀದ್ ನಂದಾವರ (ಕಲೆ-ಸಂಸ್ಕøತಿ), ನಝ್ಮತ್ತುನ್ನೀಸಾ ಲೈಝ್ ( ಸಾಹಿತ್ಯ), ಮಹಮ್ಮದ್ ಆಲಿ ಬಡ್ಡೂರು (ಕಲೆ-ಸಂಸ್ಕøತಿ) ಟಿ.ಎಂ.ಶಹೀದ್ ( ಸಂಘಟನೆ), ಯಂ.ಪಿ.ಬಷೀರ್ ಅಹ್ಮದ್ ( ಸಾಹಿತ್ಯ), ಯಾಸೀರ್ ಕಲ್ಲಡ್ಕ ( ಸಂಸ್ಕøತಿ) ಮಲ್ಲಿಕಾ ಶೆಟ್ಟಿ ( ಕಲೆ ಸಂಸ್ಕøತಿ) ಹಾಗೂ ಸೈಫ್ ಕುತ್ತಾರ್ (ಭಾಷೆ) ಇವರಿಗೆ ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಅಕಾಡೆಮಿ (ಚಮ್ಮನ) ಗೌರವ ಪ್ರಶಸ್ತಿ ಪ್ರದಾನ ನಡೆಯಲಿದೆ. ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪುತ್ತೂರು ಶಾಸಕ ಅಶೋಕ್ ರೈ ಅಕಾಡೆಮಿಯ ಬೆಲ್ಕಿರಿ ದ್ವೈಮಾಸಿಕ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ, ಕೊಂಕಣಿ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರೀಸ್, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ, ಸಂಯುಕ್ತ ಜಮಾಅತ್ ಅಧ್ಯಕ್ಷ ಮುಹಮ್ಮದ್ ಹಾಜಿ ಕೆ.ಪಿ, ಸೀರತ್ ಕಮಿಟಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಸುರಯ್ಯ ಕೂರ್ನಡ್ಕ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ದಫ್ ಹಾಡು ಮತ್ತು ಬ್ಯಾರಿಹಾಡುಗಳ ಸಂಭ್ರಮ ನಡೆಯಲಿದೆ ಎಂದು ತಿಳಿಸಿದರು.
ಗೋಷ್ಟಿಯಲ್ಲಿ ಸ್ವಾಗತ ಸಮಿತಿ ಸಂಚಾಲಕ ಅಬೂಬಕ್ಕರ್ ಆರ್ಲಪದವು, ಪ್ರಧಾನ ಕಾರ್ಯದರ್ಶಿ ನೂರುದ್ದೀನ್ ಸಾಲ್ಮರ, ಸಂಘಟನಾ ಕಾರ್ಯದರ್ಶಿ ಕೆ.ಎಂ.ಸಿದ್ದೀಕ್ ಹಾಗೂ ಕಾರ್ಯದರ್ಶಿ ವಿ.ಕೆ.ಶರೀಫ್ ಬಪ್ಪಳಿಗೆ ಇದ್ದರು.
