ಮಂಗಳೂರು : ಕಳೆದ ಆರು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆಸಾಮಿಯನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣಾ ಅಕ್ರ 91/2017, ಕಲಂ. 380 ಐ ಪಿ ಸಿ ಪ್ರಕರಣದಲ್ಲಿ, ಸುಮಾರು 6 ವರ್ಷಗಳಿಂದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ, ಬೆಂಗಳೂರು ಕುಂಬಳಗೋಡು ನಿವಾಸಿ ವೆಂಕಟೇಶ್ @ ಡಾಬರ್ ವೆಂಕಟೇಶ್ ಎಂಬಾತನನ್ನು, ಧರ್ಮಸ್ಥಳ ಠಾಣಾ ಸಿಬ್ಬಂದಿಗಳಾದ ವ್ರಷಭ, ಚರಣ್ ರಾಜ್ ರವರು ತುಮಕೂರು ಜಿಲ್ಲೆ, ತಿಪಟೂರ್ ಎಂಬಲ್ಲಿಂದ ದಸ್ತಗಿರಿ ಮಾಡಿ ನ್ಯಾಯಾಧಿಶರ ಮುಂದೆ ಹಾಜರುಪಡಿಸಿರುತ್ತಾರೆ

