ಹಲವು ಎಚ್ಚರಿಕೆಗಳ ನಡುವೆಯೂ ಮತ್ತೊಮ್ಮೆ ತ್ಯಾಜ್ಯ ಎಸೆದವರಿಂದ ಕಸ ತೆಗೆಸಿ,5000 ದಂಡ ವಿಧಿಸಿದ ಪಂಚಾಯತ್….

ನಿರಂತರವಾಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಸ ಸುರಿಯುತ್ತಿದ್ದ ಮಹಿಳೆಗೆ 5000 ದಂಡನೆ ವಿಧಿಸಿ ಸುದ್ದಿಯಾಗಿದ್ದ ಕಾಡೂರು ಗ್ರಾಮ ಪಂಚಾಯತ್ ಪಂಚಾಯತ್, ತ್ಯಾಜ್ಯ ಎಸೆಯುವವರ ವಿರುದ್ಧ ಕಠಿಣ ಕ್ರಮಕ್ಕೆ ಮತ್ತೊಮ್ಮೆ ಮುಂದಾಗಿದ್ದು ಪ್ಲಾಸ್ಟಿಕ್, ಬಾಟಲ್ ಸೇರಿದಂತೆ ಪಂಚಾಯತ್ ವ್ಯಾಪ್ತಿಯ ರಸ್ತೆ ಪಕ್ಕದಲ್ಲಿ ಕಸ ಸುರಿದಿದ್ದ ಜನಾರ್ದನ್ ಎನ್ನುವ ವ್ಯಕ್ತಿಗೆ 5000 ದಂಡನೆಯನ್ನು ವಿಧಿಸುವುದರೊಂದಿಗೆ ಅವರಿಂದಲೇ ಕಸ ತೆಗೆಸಿ, ವಿಲೇವಾರಿಗೆ ಕಳುಹಿಸುವ ಮೂಲಕ ಮತ್ತೊಮ್ಮೆ ಎಚ್ಚರಿಕೆಯ ಸಂದೇಶ ನೀಡಿದೆ. ಉಡುಪಿ ಜಿಲ್ಲಾ ಪಂಚಾಯತ್ ನಿರ್ದೇಶನದಂತೆ ಹಾಗೂ ಗ್ರಾಮ ಪಂಚಾಯತ್ ನ ಉಪವಿಧಿಗಳ ಪ್ರಕಾರ 25000ಗಳವರೆಗೆ ದಂಡನೆ ವಿಧಿಸುವ ಅವಕಾಶಗಳಿದ್ದು, ತ್ಯಾಜ್ಯವನ್ನು ವೈಜ್ಞಾನಿಕ ವಿಲೇವಾರಿಗೆ ನೀಡುವಂತೆ ಮತ್ತು ಯಾವುದೇ ಕಾರಣಕ್ಕೂ ಎಲ್ಲಿಂದರಲ್ಲಿ ಎಸೆಯದಂತೆ ಪ್ರಕಟಣೆಯಲ್ಲಿ ಸೂಚಿಸಿದೆ.


