ಮಂಗಳೂರು: ಪ್ರಧಾನಮಂತ್ರಿ ಕೌಶಲಾಭಿವೃದ್ಧಿ ಯೋಜನೆಯಡಿ ವಿವಿಧ ಉದ್ಯೋಗಕ್ಕೆ ಸಂಬಂಧಿಸಿದ ಕೌಶಲ ತರಬೇತಿ ಕಾರ್ಯಾಗಾರ ಆ. 12 ರಂದು ನಡೆಯಲಿದೆ.
ಉರ್ವದ ಮಾರುಕಟ್ಟೆ ಕಟ್ಟಡದ ಎರಡನೇ ಮಹಡಿಯಲ್ಲಿರುವ ಜಿಲ್ಲಾ ಕೌಶಲಾಭಿವೃದ್ಧಿ ಕಚೇರಿಯಲ್ಲಿ ಬೆಳಗ್ಗೆ 10 ಗಂಟೆಯಿಂದ ನಡೆಯಲಿದೆ.
ಈ ತರಬೇತಿಗೆ 18 ರಿಂದ 50 ವರ್ಷದೊಳಗಿನ ಜನರು ಹಾಜರಾಗಬಹುದು ಎಂದು ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ 0824-2453222 ಯನ್ನು ಸಂಪರ್ಕಿಸಬಹುದು.

