ಬೆಂಗಳೂರು: ನಗರದಲ್ಲಿ ಕಾನೂನು ಸುವ್ಯವಸ್ಥೆ, ಸಂಚಾರ ದಟ್ಟಣೆಯನ್ನು ಹತೋಟಿಗೆ ತರುವುದಕ್ಕಾಗಿ ರಾಜ್ಯ ಸರ್ಕಾರ ಮಹತ್ವದ ಕಾರ್ಯವೊಂದಕ್ಕೆ ಮುಂದಾಗಿದೆ.
ಬೆಂಗಳೂರು ನಗರ ಪೊಲೀಸ್ ಇಲಾಖೆಯನ್ನು ಐದು ಸ್ವತಂತ್ರ ಕಮಿಷನರೇಟ್ಗಳಾಗಿ ವಿಭಾಗಿಸಲು ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಜೊತೆಗೆ ಒಟ್ಟು 6,633 ಹೊಸ ಪೊಲೀಸ್ ಹುದ್ದೆಗಳನ್ನು ಆರಂಭಿಸುವುದಕ್ಕೂ ಮುಂದಾಗಿದೆ.
ಬೆಂಗಳೂರು ನಗರ ಪೊಲೀಸ್ ಇಲಾಖೆಯನ್ನು ಉತ್ತರ, ದಕ್ಷಿಣ, ಕೇಂದ್ರ, ಪೂರ್ವ, ಪಶ್ಚಿಮ ಉಪ ವಿಭಾಗಗಳಾಗಿ ಮಾಡಲು ಮುಂದಾಗಿದೆ. ಐದೂ ಘಟಕಗಳಿಗೆ ಐವರು ಪ್ರತ್ಯೇಕ ಪೊಲೀಸ್ ಕಮಿಷನರ್ಗಳು (ಐಜಿಪಿ ಅಥವಾ ಡಿಐಜಿ ದರ್ಜೆಯ ಅಧಿಕಾರಿಗಳು) ಇರಲಿದ್ದಾರೆ. ಇವರೆಲ್ಲರೂ ಒಬ್ಬರು ‘ಮುಖ್ಯ ‘ Chief Commissioner of Police ಅಡಿಯಲ್ಲಿ ಕೆಲಸ ಮಾಡಲಿದ್ದಾರೆ. ಈ ಮುಖ್ಯ ಕಮಿಷನರ್ ಹುದ್ದೆಯು ಡಿಜಿಪಿ (DGP) ದರ್ಜೆಯದ್ದಾಗಿರಲಿದೆ.
ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ಅಪರಾಧ ಸಂಖ್ಯೆಗಳನ್ನು ಹತೋಟಿಗೆ ತರುವುದು, ಟ್ರಾಫಿಕ್ ಸಮಸ್ಯೆಗಳ ನಿವಾರಣೆ ಮೊದಲಾದವುಗಳನ್ನು ನಿಯಂತ್ರಣಕ್ಕೆ ತರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಈ ಯೋಜನೆಗಾಗಿ ಈಗಾಗಲೇ 764 ಕೋಟಿ ರೂ. ಬಜೆಟ್ ನಿಗದಿ ಮಾಡಿದೆ.

