ಮಣಿಪಾಲದ ವಿದ್ಯಾರತ್ನನಗರದಲ್ಲಿರುವ DRNK LAB ಕೆಫೆಯ ಮೇಲೆ ಪೊಲೀಸರು ದಾಳಿ ನಡೆಸಿ, ಅಕ್ರಮವಾಗಿ ಹುಕ್ಕಾ ಸೇವನೆ ನಡೆಸುತ್ತಿದ್ದ 8 ಯುವಕರು ಹಾಗೂ ಕೆಫೆಯ ಮ್ಯಾನೇಜರ್ ಸೇರಿ ಒಟ್ಟು 9 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.


ಖಚಿತ ಸಾರ್ವಜನಿಕ ಮಾಹಿತಿಯ ಮೇರೆಗೆ ಮಣಿಪಾಲ ಪೊಲೀಸ್ ಠಾಣೆಯ ಎಎಸ್ಐ ವಾಮನ ನೇತೃತ್ವದ ತಂಡ ಡಿಸಿ ಕಚೇರಿ ರಸ್ತೆಯ ಐರಿಸ್ ಪ್ಲಾಜಾ ಕಟ್ಟಡದಲ್ಲಿರುವ DRNK LAB ಕೆಫೆಗೆ ದಾಳಿ ನಡೆಸಿತು.

ಪರಿಶೀಲನೆ ವೇಳೆ ಕೆಫೆಯೊಳಗೆ 8 ಮಂದಿ ಹುಕ್ಕಾ ಸೇವಿಸುತ್ತಿರುವುದು ಪತ್ತೆಯಾಯಿತು. ಬಳಿಕ ಕೆಫೆಯ ಮ್ಯಾನೇಜರ್ ಹಾಗೂ ಕ್ಯಾಶಿಯರ್ ಮೊಹಮ್ಮದ್ ಶಫಾನ್ನನ್ನೂ ವಶಕ್ಕೆ ಪಡೆದು ಮಹಜರು ನಡೆಸಲಾಯಿತು.

ಘಟನೆ ಸಂಬಂಧ ಕೆಫೆಯ ಮ್ಯಾನೇಜರ್ ಮತ್ತು ಹುಕ್ಕಾ ಸೇವನೆ ಮಾಡುತ್ತಿದ್ದ 8 ಮಂದಿಯ ವಿರುದ್ಧ ಕೋಟ್ಪಾ ಕಾಯ್ದೆಯಡಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

