ಬೆಂಗಳೂರು: ತುಟಿಗಳ ಅಂದ ಹೆಚ್ಚಿಸಲು ಲಿಪ್ಸ್ಟಿಕ್ ಬಳಸುವವರು ಎಚ್ಚೆತ್ತುಕೊಳ್ಳಬೇಕಾದ ಆತಂಕಕಾರಿ ವಿಷಯವೊಂದು ಬಯಲಾಗಿದೆ.
ಲಿಪ್ಸ್ಟಿಕ್ನಲ್ಲಿ ಆರೋಗ್ಯಕ್ಕೆ ಪೂರಕವಲ್ಲದ ರಾಸಾಯನಿಕ ಮತ್ತು ಲೋಹದ ಅಂಳಗಳಿರುವುದು ಕರ್ನಾಟಕದ ಆಹಾರ ಸುರಕ್ಷತಾ ಇಲಾಖೆ ನಡೆಸಿದ ಪರಿಶೀಲನೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.
ನಗರದಲ್ಲಿ ಮಾರಾಟವಾಗುವ ಸಾದಾ ಮತ್ತು ಬ್ರಾಂಡೆಡ್ ತುಟಿಯ ಬಣ್ಣಗಳ ಮಾದರಿಗಳನ್ನು ಇಲಾಖೆ ಪರೀಕ್ಷೆಗೆ ಒಳಪಡಿಸಲಾಗಿದೆ. ಅವುಗಳಲ್ಲಿ 23 ಲಿಪ್ಸ್ಟಿಕ್ ಮಾದರಿಗಳಲ್ಲಿ ಆರೋಗ್ಯಕ್ಕೆ ಹಾನಿ ಮಾಡುವ ರಾಸಾಯನಿಕಗಳು ಪತ್ತೆಯಾಗಿವೆ. ಕೆಲವು ಮಾದರಿಗಳಲ್ಲಿ ಕಾರ್ಸಿನೋಜೆನಿಕ್, ಮೆಟಲ್ ಅಂಶಗಳೂ ಪತ್ತೆಯಾಗಿವೆ. ಇಂತಹ ರಾಸಾಯನಿಕಯುಕ್ತ ವಸ್ತುಗಳನ್ನು ದೀರ್ಘಕಾಲ ಬಳಕೆ ಮಾಡುವುದು ಅಪಾಯ ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ಅದರಲ್ಲೂ ಕಾರ್ಸಿನೋಜೆನಿಕ್ ಅಂಶಗಳಿರುವ ಲಿಪ್ಸ್ಟಿಕ್ಗಳ ಬಳಕೆ ಅಪಾಯಕಾರಿ ಎಂದು ಇಲಾಖೆ ಮಾಹಿತಿ ನೀಡಿದೆ. ಲಿಪ್ಸ್ಟಿಕ್ ಪರೀಕ್ಷಾ ವರದಿ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಇಲಾಖೆ ಮಾಹಿತಿ ನೀಡಿದೆ.

