ಇನ್ನೇನು ರಕ್ಷಾ ಬಂಧನ ಬರಲಿದೆ. ಅಣ್ಣ ತಂಗಿಯರ ಬಾಂಧವ್ಯಕ್ಕೆ ಬಣ್ಣ ಹಚ್ಚುವ ರಕ್ಷಾ ಬಂಧನದ ಹಿನ್ನೆಲೆ ಪೋಸ್ಟ್ ಆಫೀಸ್ ವಿಶೇಷ ಆಫರ್ ತಂದಿದೆ.
ಎಲ್ಲಾ ಸಂದರ್ಭದಲ್ಲೂ ಸಹೋದರ – ಸಹೋದರಿಯರು ಜೊತೆಯಲ್ಲೇ ಇರಲು ಸಾಧ್ಯವಿಲ್ಲ. ದೂರದಲ್ಲಿದ್ದರೂ ಹಬ್ಬವನ್ನು ಹತ್ತಿರವಾಗಿಸುವ ನಿಟ್ಟಿನಲ್ಲಿ ಪೋಸ್ಟ್ ಆಫೀಸ್ ಈ ವಿನೂತನ ಕೆಲಸಕ್ಕೆ ಕೈ ಹಾಕಿದೆ.
ಸಹೋದರಿಯರು ತಮ್ಮ ರಕ್ಷಾಬಂಧನವನ್ನು ಪೋಸ್ಟ್, ಕೊರಿಯರ್ ಮೂಲಕ ಅಣ್ಣ – ತಮ್ಮನಿಗೆ ಕಳಿಸುತ್ತಾರೆ. ನೀವೂ ಹೀಗೆ ಮಾಡುತ್ತಿದಲ್ಲಿ ಪೋಸ್ಟ್ ಆಫೀಸ್ ನಿಮಗೊಂದು ಆಫರ್ ನೀಡುತ್ತಿದೆ. ಆಗಸ್ಟ್ 12, 2026 ರಿಂದ ಸ್ಪೀಡ್ ಪೋಸ್ಟ್ ಮೂಲಕ ರಕ್ಷೆ ಕಳುಹಿಸುವವರಿದ್ದರೆ ನಿಮಗೆ ವಿಶೇಷ ಕೊಡುಗೆ ಸಿಗಲಿದೆ. ಈ ಕೊರಿಯನ್ ಮೇಲೆ ಶೇ. 10ರಷ್ಟು ರಿಯಾಯಿತಿ ಸಿಗಲಿದೆ. ಸಹೋದರಿಯರ ರಕ್ಷೆಯನ್ನು ಅವರ ಸಹೋದರರಿಗೆ ಸುರಕ್ಷಿತವಾಗಿ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ಲಕೋಟೆಗಳು ಅತ್ಯಂತ ಕೈಗೆಟುಕುವ ದರಗಳಲ್ಲಿ ಲಭ್ಯವಿರಲಿವೆ. ಈ ಲಕೋಟೆಗಳು ವಾಟರ್ ಪ್ರೂಫ್ ಆಗಿರಲಿವೆ.
ಸಣ್ಣ ಕವರ್ಗಳನ್ನು ಕಳುಹಿಸಿದಲ್ಲಿ 10 ರೂಪಾಯಿ ಪಾವತಿಸಬೇಕು. ದೊಡ್ಡ ಕವರ್ ಬೆಲೆ 15 ರೂಪಾಯಿ. ನೀವು ರಕ್ಷೆ ಜೊತೆಗೆ ಸ್ವೀಟ್ ಕೂಡ ಕಳುಹಿಸಬಹುದು. ಆ ಬಾಕ್ಸ್ ಗೆ 30 ರೂಪಾಯಿ. ಅಂಚೆ ಕಚೇರಿಯಲ್ಲಿ ಲಭ್ಯವಿರುವ ಈ ಲಕೋಟೆಗಳನ್ನು ಲ್ಯಾಮಿನೇಟ್ ಮಾಡಲಾಗಿದೆ. ಮಳೆ ಅಥವಾ ತೇವಾಂಶದ ಸಂದರ್ಭದಲ್ಲಿ ನೀವು ಕಳುಹಿಸುವ ರಕ್ಷೆ ಯಾವುದೇ ಹಾನಿ ಸಂಭವಿಸುವುದಿಲ್ಲ.

