ನವದೆಹಲಿ: ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL) ನಲ್ಲಿ ಖಾಲಿ ಇರುವ ಸ್ಟೇಷನ್ ಮಾಸ್ಟರ್, ಸಹಾಯಕ ಲೋಕೋ ಪೈಲಟ್ ಹಾಗೂ ಎಂಜಿನಿಯರಿಂಗ್ ವಿಭಾಗದ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಒಟ್ಟು 201 ಹುದ್ದೆಗಳಿಗೆ ಅರ್ಜಿ ಆಹಾವಾನಿಸಲಾಗಿದೆ. ಭಾರತ ದೇಶಾದ್ಯಂತ ಉದ್ಯೋಗಾವಕಾಶವಿದೆ. 18,000 ರೂ. ಗಳಿಂದ – 44,900 ರೂ. ವೇತನ ಶ್ರೇಣಿಯ ಉದ್ಯೋಗ ಇದಾಗಿದೆ.
ಜೂನಿಯರ್ ಎಂಜಿನಿಯರ್ (ಸಿವಿಲ್) 25, ಟ್ರ್ಯಾಕ್ ನಿರ್ವಹಣೆ 57, ಹಿರಿಯ ವಿಭಾಗ ಎಂಜಿನಿಯರ್ (ಎಸ್ &ಟಿ) 5, ಇಎಸ್ಟಿಎಂ 15, ವಿಭಾಗ ನಿಯಂತ್ರಕ 9, ಸ್ಟೇಷನ್ ಮಾಸ್ಟರ್ 15, ಸರಕು ರೈಲು ವ್ಯವಸ್ಥಾಪಕ 10, ಸಹಾಯಕ ಲೋಕೋ ಪೈಲಟ್ 30, ಹಿರಿಯ ವಿಭಾಗ ಎಂಜಿನಿಯರ್ (ಯಾಂತ್ರಿಕ) 6, ಜೂನಿಯರ್ ಎಂಜಿನಿಯರ್ (ಮೆಕ್ಯಾನಿಕಲ್) 7, ತಂತ್ರಜ್ಞ-III (ಯಾಂತ್ರಿಕ) 15, ವಾಣಿಜ್ಯ ಮೇಲ್ವಿಚಾರಕ 7 ಹುದ್ದೆ ಗಳ ಭರ್ತಿಗೆ ಅರ್ಜಿ ಆಹ್ವಾನಿಸಿರುವುದಾಗಿದೆ.
ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಹುದ್ದೆಗೆ ಅನುಗುಣವಾಗಿ 10 ನೇ ತರಗತಿ, ITI, ಡಿಪ್ಲೊಮಾ, ಯಾವುದೇ ಪದವಿಯನ್ನು ಪೂರ್ಣಗೊಳಿಸಿರಬೇಕು.
ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಮತ್ತು ಗರಿಷ್ಠ 45 ವರ್ಷ ವಯಸ್ಸಿನವರಾಗಿರಬೇಕು.
ಮಾಜಿ ಸೈನಿಕರು (UR & EWS) ಅಭ್ಯರ್ಥಿಗಳಿಗೆ: 03 ವರ್ಷ, ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ: 05 ವರ್ಷ, ಮಾಜಿ ಸೈನಿಕರು (ಎಸ್ಸಿ&ಎಸ್ಟಿ) ಅಭ್ಯರ್ಥಿಗಳಿಗೆ: 08 ವರ್ಷ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ: 10 ವರ್ಷ ವಯೋಮಿತಿ ಸಡಿಲಿಕೆ ಇದೆ.
ಯುಆರ್/ಒಬಿಸಿ-ಎನ್ಸಿಎಲ್ ಸಾಮಾನ್ಯ ಅಭ್ಯರ್ಥಿಗಳಿಗೆ 1,180 ರೂ., ಎಸ್ಸಿ/ಎಸ್ಟಿ/ಮಾಜಿ ಸೈನಿಕರು/ಮಹಿಳೆಯರು/ಅಲ್ಪಸಂಖ್ಯಾತರು/ EBC/ PwBD ಅಭ್ಯರ್ಥಿಗಳಿಗೆ ಯಾವುದೆ ಶುಲ್ಕವಿಲ್ಲ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ. ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಆ. 31,2026.

