ನವದೆಹಲಿ: ಭಾರತದ ಸ್ವಾತಂತ್ರ್ಯ ಸಂದರ್ಭದಲ್ಲಿ ನವದೆಹಲಿಯ ಕೆಂಪುಕೋಟೆಯ ಮೇಲೆ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಗೀತೆ ಮೊಳಗಲಿದೆ.
ಈ ಸಂಬಂಧ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದ್ದು, ರಾಷ್ಟ್ರೀಯ ಗೀತೆ ವಂದೇ ಮಾತರಂಗೆ 150 ವರ್ಷ ಆಗಿದ್ದು ಈ ಹಿನ್ನೆಲೆ ಸ್ವಾತಂತ್ರ್ಯ ಸಂದರ್ಭದಲ್ಲಿ ಈ ಗೀತೆಗೆ ವಿಶೇಷ ಆದ್ಯತೆ ನೀಡಲಾಗಿದೆ.
ಈ ಬಾರಿ ಕೆಂಪು ಕೋಟೆಗೆ ಬಾವುಟ ಹಾರಿಸಲು ಪ್ರಧಾನಿ ಮೋದಿ ಬರುತ್ತಿದ್ದ ಹಾಗೆಯೇ ವಂದೇ ಮಾತರಂ ಮೊಳಗಲಿದೆ. ನಂತರ ಪ್ರಧಾನಿ ಅವರು ಧ್ವಜಾರೋಹಣ ನಡೆಸಿದ ಬಳಿಕ ರಾಷ್ಚ್ರಗೀತೆ ಮೊಳಗಲಿದೆ. ಬಳಿಕ ಪ್ರಧಾನಿ ಅವರು ಭಾಷಣ ಮಾಡಲಿದ್ದಾರೆ.
ರಕ್ಷಣಾ ಸಚಿವಾಲಯ ಮುದ್ರಿಸಿರುವ ಆಮಂತ್ರಣ ಪತ್ರಿಕೆಯಲ್ಲಿ ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಮುದ್ರಿಸಲಾಗಿದೆ.

