ಬ್ರಹ್ಮಾವರ / ಕುಂದಾಪುರ: ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ಕರಾವಳಿ ಭಾಗದ ಪ್ರಮುಖ ಗೃಹೋಪಯೋಗಿ ಹಾಗೂ ಇಲೆಕ್ಟ್ರಾನಿಕ್ಸ್ ಸಂಸ್ಥೆಯಾದ ‘ಜನನಿ ಎಂಟರ್ಪ್ರೈಸಸ್’ (Janani Enterprises) ಗ್ರಾಹಕರಿಗಾಗಿ ‘ಜನನಿ ಫ್ರೀಡಂ ಸೇಲ್’ (Janani Freedom Sale) ಬೃಹತ್ ಆಫರ್ ಮೇಳವನ್ನು ಆಯೋಜಿಸಿದೆ. ಆಗಸ್ಟ್ 9 ರಿಂದ ಆಗಸ್ಟ್ 20, 2026 ರವರೆಗೆ ನಡೆಯಲಿರುವ ಈ ವಿಶೇಷ ಸೇಲ್ನಲ್ಲಿ ಗ್ರಾಹಕರಿಗೆ ಭಾರಿ ರಿಯಾಯಿತಿ, ಆಕರ್ಷಕ ಆಫರ್ಗಳು ಹಾಗೂ ವಿಶೇಷ ಉಡುಗೊರೆಗಳನ್ನು ನೀಡಲಾಗುತ್ತಿದೆ. ಈ ಬಾರಿಯ ಸೇಲ್ನ ಮುಖ್ಯ ಆಕರ್ಷಣೆಯಾಗಿ “ಖರೀದಿಸಿರಿ ಮತ್ತು ಚಿನ್ನ ಗೆಲ್ಲಿರಿ” ಯೋಜನೆಯನ್ನು ಪರಿಚಯಿಸಲಾಗಿದ್ದು, ಮಳಿಗೆಯಲ್ಲಿ ಯಾವುದೇ ವಸ್ತುಗಳನ್ನು ಖರೀದಿಸುವ ಗ್ರಾಹಕರು ನೈಜ ಚಿನ್ನವನ್ನು ಗೆಲ್ಲುವ ಸುವರ್ಣಾವಕಾಶವನ್ನು ಪಡೆಯಲಿದ್ದಾರೆ.

ಜನನಿ ಎಂಟರ್ಪ್ರೈಸಸ್ನಲ್ಲಿ ಮನೆಗೆ ಅಗತ್ಯವಿರುವ ಎಲ್ಲಾ ರೀತಿಯ ಪ್ರಮುಖ ವಸ್ತುಗಳ ವಿಶಾಲ ಶ್ರೇಣಿ ಒಂದೇ ಸೂರಿನಡಿ ಲಭ್ಯವಿದೆ. ಸ್ಮಾರ್ಟ್ ಟಿವಿ, ವಾಟರ್ ಪ್ಯೂರಿಫೈಯರ್ ಹಾಗೂ ಆಡಿಯೋ ಸಿಸ್ಟಮ್ಗಳನ್ನೊಳಗೊಂಡ ಇಲೆಕ್ಟ್ರಾನಿಕ್ಸ್ ವಿಭಾಗ, ಸೋಫಾ ಸೆಟ್ಗಳು, ಡೈನಿಂಗ್ ಟೇಬಲ್, ಆಫೀಸ್ ಚೇರ್ ಹಾಗೂ ಮೆತ್ತೆಗಳನ್ನೊಳಗೊಂಡ ಫರ್ನಿಚರ್ ವಿಭಾಗದ ವಸ್ತುಗಳು ಇಲ್ಲಿ ಲಭ್ಯವಿವೆ. ಇದರ ಜೊತೆಗೆ ವಾಷಿಂಗ್ ಮೆಷಿನ್, ರೆಫ್ರಿಜರೇಟರ್, ಏರ್ ಕಂಡೀಷನರ್, ಮಿಕ್ಸರ್ ಗ್ರೈಂಡರ್, ಗ್ಯಾಸ್ ಸ್ಟೌವ್ ಮುಂತಾದ ಗೃಹೋಪಯೋಗಿ ಉಪಕರಣಗಳು, ಪ್ರಸಿದ್ಧ ಬ್ರ್ಯಾಂಡ್ಗಳ ನೂತನ ಸ್ಮಾರ್ಟ್ಫೋನ್ಗಳು ಹಾಗೂ ಗೃಹ ಬಳಕೆಯ ಸೌರ ವಿದ್ಯುತ್ ಸಿಸ್ಟಮ್ ಮತ್ತು ಇನ್ವರ್ಟರ್/ಯುಪಿಎಸ್ ವ್ಯವಸ್ಥೆಗಳು ವಿಶೇಷ ರಿಯಾಯಿತಿ ದರದಲ್ಲಿ ದೊರೆಯಲಿವೆ.
ಈ ಫ್ರೀಡಂ ಸೇಲ್ನಲ್ಲಿ ಖರೀದಿಸುವ ಗ್ರಾಹಕರಿಗೆ ಶೇಕಡಾ 20% ವರೆಗೆ ಕ್ಯಾಶ್ಬ್ಯಾಕ್, ಖಚಿತ ಉಡುಗೊರೆಗಳು, ವಿಶೇಷ ಡಿಸ್ಕೌಂಟ್ ಹಾಗೂ ಉಚಿತ ಡೆಲಿವರಿ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಗ್ರಾಹಕರ ಅನುಕೂಲಕ್ಕಾಗಿ ಬಜಾಜ್ ಫೈನಾನ್ಸ್, ಟಿವಿಎಸ್ ಕ್ರೆಡಿಟ್, ಹೆಚ್ಡಿಬಿ ಫೈನಾನ್ಶಿಯಲ್ ಸರ್ವಿಸಸ್, ಐಡಿಎಫ್ಸಿ ಫಸ್ಟ್ ಬ್ಯಾಂಕ್ ಹಾಗೂ ಹೆಚ್ಡಿಎಫ್ಸಿ ಬ್ಯಾಂಕ್ ಮೂಲಕ 0% ಡೌನ್ ಪೇಮೆಂಟ್ ಮತ್ತು 0% ಪ್ರೊಸೆಸಿಂಗ್ ಶುಲ್ಕದೊಂದಿಗೆ ಸುಲಭ ಇಎಮ್ಐ (Easy 0% EMI) ಸೌಲಭ್ಯ ದೊರೆಯಲಿದೆ. ಅಲ್ಲದೆ ಎಲ್ಲಾ ರೀತಿಯ ಕ್ರೆಡಿಟ್ ಕಾರ್ಡ್ಗಳನ್ನೂ ಇಲ್ಲಿ ಸ್ವೀಕರಿಸಲಾಗುತ್ತದೆ.
ಈ ವಿಶೇಷ ಕೊಡುಗೆಗಳು ಬ್ರಹ್ಮಾವರದ ಮದುವನ ಕಾಂಪ್ಲೆಕ್ಸ್ನಲ್ಲಿರುವ ಮಳಿಗೆ (ಸಂಪರ್ಕ: 0820-2987075, 9972013221) ಹಾಗೂ ಕುಂದಾಪುರದ ಯೂನಿಟ್ ಹಾಲ್ ಬಳಿಯಿರುವ ಮಳಿಗೆಯಲ್ಲಿ (ಸಂಪರ್ಕ: 7619473221, 9036324221) ಲಭ್ಯವಿರಲಿವೆ. ಪರಿಮಿತ ಅವಧಿಯ ಈ ಬೃಹತ್ ಆಫರ್ ಹಾಗೂ ಚಿನ್ನ ಗೆಲ್ಲುವ ಅವಕಾಶವನ್ನು ಕರಾವಳಿಯ ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕಾಗಿ ಸಂಸ್ಥೆಯ ಆಡಳಿತ ಮಂಡಳಿ ವಿನಂತಿಸಿದೆ.

