ಕಟಪಾಡಿ : ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್ ಬಳಿಯ ಸರ್ವೀಸ್ ರಸ್ತೆಯಲ್ಲಿ ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಇತರೇ ವಾಹನಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದ ಘಟನೆ ನಡೆದಿದೆ.
ಉಡುಪಿಯಿಂದ ಬರುತ್ತಿದ್ದ ಟಾಟಾ ಪಂಚ್ ಇಲೆಕ್ಟ್ರಿಕ್ ಕಾರು ಸರ್ವೀಸ್ ರಸ್ತೆಯಲ್ಲಿನ ಹಂಪ್ಸ್ ಮೇಲೇರಿದ ಬಳಿಕ ರಿಕ್ಷಾಕ್ಕೆ ಡಿಕ್ಕಿ ಹೊಡೆದು, ಬಳಿಕ ಬಸ್, ಓಮ್ನಿ, ಅಂಗಡಿ ಬಳಿ ಪಾರ್ಕಿಂಗ್ ಮಾಡಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ವಾಹನಗಳು ಜಖಂಗೊಂಡಿದೆ.
ಕಾಪು ಪೊಲೀಸ್ ಠಾಣೆ ಎಎಸ್ಐ ದಯಾನಂದ್, ಆರಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

