ಪಡುಬಿದ್ರಿ : ಹಸು – ಕರುವನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿಹಾಕಿ ಟೆಂಪೋದಲ್ಲಿ ಸಾಗಿಸುತ್ತಿದ್ದ ಪ್ರಕರಣವನ್ನು ಪಡುಬಿದ್ರಿ ಪೊಲೀಸ್ ಠಾಣೆಯ ಎಎಸ್ಐ ದಿನಕರ್ ಮತ್ತು ಸಿಬಂದಿ ಪತ್ತೆಹಚ್ಚಿದ್ದು, ಆರೋಪಿಗಳಾದ ಇನ್ನ ನಿವಾಸಿ ರಫೀಕ್ ಖಾನ್ ಮತ್ತು ಮೂಲ್ಕಿ ಶಿಮಂತೂರಿನ ಮಯ್ಯದಿಯನ್ನು ಬಂಧಿಸಿದ್ದಾರೆ. ಹಸು – ಕರುವನ್ನು ರಕ್ಷಿಸಲಾಗಿದೆ.
ಆರೋಪಿಗಳು ಅವುಗಳನ್ನು ಸಾಂತೂರಿನಿಂದ ಮೂಲ್ಕಿಯ ಅಕ್ರಮ ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದರೆನ್ನಲಾಗಿದೆ.
ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

