ಉಡುಪಿ : ಪರವಾನಿಗೆ ಇಲ್ಲದೆ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅಂಬಲಪಾಡಿ ಜಂಕ್ಷನ್ ಬಳಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ಲಾರಿಯನ್ನು ತಡೆದು ಪರಿಶೀಲಿಸಿದಾಗ ವಾಹನದಲ್ಲಿ ಪರವಾನಿಗೆ ಇಲ್ಲದೇ ಅಂದಾಜು 25-30 ಟನ್ ತೂಕದ ಮರಳನ್ನು ವಾಹನದ ಮಾಲಕ ನಾರಾಯಣ ಅವರ ಸೂಚನೆಯಂತೆ ಮಂಗಳೂರಿನ ತುಂಬೆಯಿಂದ ಕಳವು ಮಾಡಿ ಕುಂದಾಪುರಕ್ಕೆ ವಾಹನ ಸಾಗಾಟ ಮಾಡುತ್ತಿದ್ದ ಎನ್ನುವ ಅಂಶ ಪೊಲೀಸರಿಗೆ ತಿಳಿದು ಬಂದಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

